Friday, December 13, 2024

Latest Posts

Shetter : ಬಿಜೆಪಿ ಲೀಡರ್ ಲೆಸ್ ಪಕ್ಷ ಆಗಿದೆ; ಶೆಟ್ಟರ್ ಲೇವಡಿ

- Advertisement -

ಧಾರವಾಡ; ನಗರದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಮಾದ್ಯಮದವರಿಗೆ ಪ್ರತಿಕ್ರಿಯಿಸಿ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರು. ಈಗಾಗಲೇ ಲೋಕಸಭಾ ಚುನಾವಣೆಗೆ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿರುವ ಕೈ ಪಾಳಯ ಹಲವು ನಾಯಕರನ್ನು ಮನವೊಲಿಸಿ ಪಕ್ಷಕ್ಕೆ ಸೇರಿಸಿಕೊಂಡಿದೆ. ಇನ್ನು ಹಲವರಿಗೆ ಗಾಳ ಹಾಕಿರುವ ಶೆಟ್ಟರ್ ನಾಯಕರನ್ನು ಸೆಳೆಯಲು ಮುಂದಾಗಿದ್ದಾರೆ ಈ ಕುರಿತು ಮಾತನಾಡಿದರು.

ಕೆಲವರು ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದೇ ಬರುತ್ತಾರೆ ಅದು ಒಂದೇ ದಿನದಲ್ಲಿ ಆಗುವಂತದಲ್ಲ ಈಗ  ಮಾತುಕತೆಗಳು ನಡೆದಿವೆ. ಪಕ್ಷಕ್ಕೆ ಕರೆದುಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಜಿಲ್ಲೆ ಮಾತ್ರವಲ್ಲ ಕರ್ನಾಟಕದ ಬಗ್ಗೆ ನಾನು ಮಾತನಾಡುತ್ತಿರುವೆ ಬಹಳಷ್ಟು ಜನ ಸಂಪರ್ಕದಲ್ಲಿ ಇದ್ದಾರೆ ಆದರೆ ಕರೆದುಕೊಳ್ಳುವ ಬಗ್ಗೆ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ ಪಕ್ಷದ ನಿರ್ಧಾರಗಳ ಬಳಿಕ ಕೆಲವರು ಸೇರಿಕೊಳ್ಳುತ್ತಾರೆ

ಅಮಿತ್ ಶಾ ಫೋನ್ ಮಾಡಿದ್ದರೆಂಬ ವಿಚಾರ: ಅದು ಸುಳ್ಳು ಸುದ್ದಿ ಹಬ್ಬಿತ್ತು ಅವರು ನನಗೆ ಕರೆ ಮಾಡಿಯೇ ಇಲ್ಲ ಆದರೂ ಆ ರೀತಿ ಸುದ್ದಿ ಯಾಕೆ  ಹಬ್ಬಿತು ಗೊತ್ತಿಲ್ಲ  ಹೀಗಾಗಿ ಅದರ ಮೂಲ ಹುಡುಕಿ ಅಂತ ನಾನು ಆಗಲೇ ಹೇಳಿದ್ದೆ ಆಗ ಅದು ಸುಳ್ಳು ಸುದ್ದಿ ಅಂತಾ ಸಾಬೀತಾಗಿ ಹೋಗಿದೆ

ಮುನೇನಕೊಪ್ಪ ಕಾಂಗ್ರೆಸ್ ಸೇರ್ಪಡೆ ವಿಚಾರ: ಅವರ ಜೊತೆ ನಾನು ವೈಯಕ್ತಿಕವಾಗಿ ಮಾತನಾಡಿಲ್ಲಅವರ ಮನಸ್ಸಿನಲ್ಲಿ ಏನಿದೆ ಗೊತ್ತಿಲ್ಲ.

ಗ್ಯಾರಂಟಿ ಯೋಜನೆಗಳ ಬಗ್ಗೆ ಅಂತಾರಾಷ್ಟ್ರೀಯ ಸಂಸ್ಥೆಯಿಂದ ಅಧ್ಯಯನ ವಿಚಾರ; ಚುನಾವಣೆಯಲ್ಲಿ ಪಕ್ಷ ಐದು ಗ್ಯಾರಂಟಿ ಘೋಷಣೆ ಮಾಡಿತ್ತು, ಇದಕ್ಕೆಲ್ಲ‌ ಹಣ ಎಲ್ಲಿಂದ ತರುತ್ತಾರೆ ಅಂತಾ ಅನೇಕರು ಪ್ರಶ್ನೆ ಮಾಡಿದ್ದರು ಅನುಷ್ಠಾನ ಬೇಗ ಮಾಡಿ ಅಂತಾ ಒತ್ತಾಯ ಶುರು ಮಾಡಿದ್ದರು, ಬಜೆಟ್‌ನಲ್ಲಿ ಸಿದ್ದರಾಮಯ್ಯ ಹಣ ನಿಗದಿ ಮಾಡಿದ್ರು ಇದರಿಂದಾಗಿ ನಾಲ್ಕು ಗ್ಯಾರಂಟಿಗಳು ಜಾರಿಗೆ ಬಂದಿವೆ ಜನ ಖುಷಿಯಲ್ಲಿದ್ದಾರೆ ಬಡವರು, ದೀನ ದಲಿತರು ಖುಷಿಯಲ್ಲಿದ್ದಾರೆ ಯಾವ ರಾಜ್ಯದಲ್ಲಿಯೂ ಇಂತಹ ಯೋಜನೆ ಆಗಿಲ್ಲ ದೇಶದ ಇತಿಹಾಸದಲ್ಲಿಯೇ ಇದು ಮೊದಲು ಹೀಗಾಗಿ ನುರಿತ ತಜ್ಞರು ಈ ಬಗ್ಗೆ ಅಧ್ಯಯನಕ್ಕೆ ಮುಂದಾಗಿದ್ದಾರೆ ಹೀಗಾಗಿ ಕಾಂಗ್ರೆಸ್ ಸರ್ಕಾರಕ್ಕೆ ನಾನು ಅಭಿನಂದನೆ ಸಲ್ಲಿಸುವೆ

ಬಿಜೆಪಿ ಅವಧಿಯ ಹಗರಣಗಳ ತನಿಖೆ ವಿಚಾರ: ಹಿಂದೆ ಕಾಂಗ್ರೆಸ್ ವಿರೋಧ ಪಕ್ಷದಲ್ಲಿತ್ತು ಆಗ ಕೆಲ ಹಗರಣಗಳ ತನಿಖೆಗೆ ಆಗ್ರಹಿಸಲಾಗಿತ್ತು ಆದರೆ ಆಗಿನ ಸರ್ಕಾರ ತನಿಖೆ ಮಾಡಲಿಲ್ಲ ಈಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಹೀಗಾಗಿ ಆಗ ಮಾಡಿದ ಆರೋಪಗಳ ತನಿಖೆ ಶುರುವಾಗಿದೆ

ಬಿಜೆಪಿ ವಿಪಕ್ಷ ನಾಯಕ ಆಯ್ಕೆ ವಿಳಂಬ ವಿಚಾರ: ಯಾವ ರೀತಿ ಶೋಚನೀಯ ಸ್ಥಿತಿಗೆ ಬಂದಿದೆ ನೋಡಿ ಯಾವ ರೀತಿ ಕುಸಿತಾ ಇದೆ ಪಕ್ಷ ಅದು ಲೀಡರ್‌ಲೆಸ್ ಪಾರ್ಟಿ ಆಗಿದೆ ಕೆಲವೆ ಕೆಲವರ ಹಿಡಿತದಲ್ಲಿ ಬಿಜೆಪಿ ಇದೆ ಒಂದು ಕೆಲವರ ಹಿಡಿತಕ್ಕೆ ಸಿಕ್ಕರೇ ಏನಾಗುತ್ತದೆ ಬಿಜೆಪಿ ವಿರುದ್ಧ ಮಾಜಿ ಸಿಎಂ ಜಗದೀಶ ಶೆಟ್ಟರ್ ಲೇವಡಿ ಮಾಡಿದರು.

DK shivakumar: ನಮ್ಮ ಆಣೆಕಟ್ಟುಗಳಿಗೆ ಭೇಟಿ ನೀಡಿ ವಾಸ್ತವಂಶ ಪರಿಶೀಲಿಸಲಿ..!

Kaveri: ಕಾವೇರಿ ವಿಚಾರ; ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಿ:ಬಸವರಾಜ ಬೊಮ್ಮಾಯಿ

Forest: ಅರಣ್ಯ ಇಲಾಖೆ ಶಾರ್ಪ್ ಶೂಟರ್ ಮೇಲೆ ಕಾಡಾನೆ ದಾಳಿ..!

- Advertisement -

Latest Posts

Don't Miss