ಧಾರವಾಡ: ತಾಲೂಕಿನ ನರೇಂದ್ರ ಗ್ರಾಮದ ಬಳಿ ಇರುವ ಗುಡ್ಡದ ಬಸವಣ್ಣ ದೇವರ ದರ್ಶನಕ್ಕೆ ಹೋಗಿದ್ದ ಇಬ್ಬರು ಯುವಕರು ರಸ್ತೆ ಅಪಘಾತದಲ್ಲಿ ಧಾರುಣವಾಗಿ ಸಾವಿಗೀಡಾಗಿರುವ ಘಟನೆ ಬೇಲೂರ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಭವಿಸಿದೆ.
ಕೋಟೂರ ಗ್ರಾಮದ ನಾಗರಾಜ ಪರಕಳ್ಳಿ (22) ಮತ್ತು ಗಂಗಾಧರ ಹೊಸವಾಳ (22) ಎಂಬುವವರೇ ಸಾವಿಗೀಡಾದ ದುರ್ದೈವಿಗಳು.
ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದುಕೊಂಡು ಹೋಗಿದೆ. ಈ ಇಬ್ಬರೂ ಯುವಕರ ಮೃತದೇಹಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೃಶ್ಯ ಕಂಡು ಬಂತು. ಘಟನಾ ಸ್ಥಳಕ್ಕೆ ಗರಗ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
BJP: ಪ್ರದೀಪ್ ಶೆಟ್ಟರ್ ಅಸಮಾಧಾನದ ಬೆನ್ನಲ್ಲೇ ಶುರುವಾಯ್ತಾ ರಾಜೀನಾಮೆ ಪರ್ವ?
Lokayukta: ಮಿನಿ ವಿಧಾನಸೌಧದ ಅಧಿಕಾರಿಗಳಿಗೆ ನಡುಕ ಹುಟ್ಟಿಸಿದ ಲೋಕಾಯುಕ್ತ ದಾಳಿ..!
HK Patil: ಮೋಡ ಬಿತ್ತನೆ ಕುರಿತು ಮುಖ್ಯಮಂತ್ರಿಗಳಿಗೆ ವಿಶ್ವಾಸ ಮೂಡಿಸುತ್ತೇನೆ..!