Badminton: ಗವರ್ನರ್ ಜೊತೆ ಬ್ಯಾಡ್ಮಿಂಟನ್ ಆಡಿದ ಕಾರ್ಮಿಕ‌‌ ಸಚಿವ ಸಂತೋಷ್ ಲಾಡ್

ಬೆಂಗಳೂರು: ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್‌ (ಕೆಬಿಎ) ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಿದ್ದ ಯೋನೆಕ್ಸ್‌- ಸನ್‌ರೈಸ್‌ 46 ನೇ ಅಂತರ ರಾಜ್ಯ- ಅಂತರ ವಲಯ ಹಾಗೂ ಜೂನಿಯರ್‌ ನ್ಯಾಷನಲ್‌ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ನಲ್ಲಿ ರಾಜ್ಯಪಾಲರಾದ  ಥಾವರ್ ಚಂದ್ ಗೆಹ್ಲೋಟ್ ಮತ್ತು ಕಾರ್ಮಿಕ ಸಚಿವ ಸಂತೋಷ್ ಲಾಡ್ ಬ್ಯಾಟ್ಮಿಂಟನ್ ಆಡುವ ಮೂಲಕ ಚಾಲನೆ ನೀಡಿದರು.

ಇಂದಿನಿಂದ 5 ದಿನಗಳ ಕಾಲ ನಡೆಯುವ ಟೂರ್ನಮೆಂಟ್ ಗೆ ದೇಶದ ಎಲ್ಲ ರಾಜ್ಯಗಳಿಂದ ಪ್ರತಿಭಾನ್ವಿತ ಬ್ಯಾಡ್ಮಿಂಟನ್ ಆಟಗಾರರು ಭಾಗವಹಿಸಲು ಆಗಮಿಸಿದ್ದಾರೆ.ಸಮಾರಂಭದ ಉದ್ಘಾಟಕರಾಗಿ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಮುಖ್ಯ ಅತಿಥಿಗಳಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ & ವಿಧಾನಪರಿಷತ್ ಸದಸ್ಯ ಎಮ್ ಎನ್ ನಾಗರಾಜ್ ಅವರು ಕೆಬಿಎ ಅಧ್ಯಕ್ಷ ಮನೋಜ್‌ ಕುಮಾರ್‌ ಜಿ ಹೊಸ್‌ಪೇಟಿಮಠ ಉಪಸ್ಥಿತರಿದ್ದರು.

ಟೂರ್ನಮೆಂಟ್ ಉದ್ಘಾಟನೆ‌ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಜೊತೆ ಕಾರ್ಮಿಕ ಸಚಿವ ಸಂತೋಷ್‌‌ ಲಾಡ್ ಅವರು ಬ್ಯಾಡ್ಮಿಂಟನ್ ಆಟವಾಡಿ ಕ್ರೀಡಾಳುಗಳ ಕ್ರೀಡಾ ಸ್ಪೂರ್ತಿಯನ್ನು ಹೆಚ್ಚಿಸಿದರು. ಎಲ್ಲ ಆಟಗಾರರು ಕ್ರೀಡಾ ಮನೋಭಾವನೆಯಿಂದ ಆಡಿ ಎಂದು ಶುಭ ಹಾರೈಸಿದರು.

farmer and Bank: ರಾಜಿ ಸಂಧಾನ ಮೂಲಕ ಪ್ರಕರಣ ಇತ್ಯರ್ಥ:ನ್ಯಾಯಾಧೀಶ ಚಿನ್ನಣ್ಣ..!

Builders: ಪ್ಲಾಟ್ ಮಾರಾಟ ಮಾಡಿದ್ದರೂ ಖರೀದಿ ಪತ್ರ ಮಾಡಿಕೊಡದ ಬಿಲ್ಡರ್..!

Auto: ಒಂದೇ ದಿನದಲ್ಲಿ ಆಟೋ ರಿಕ್ಷಾ ಕಳ್ಳರನ್ನು ಬಂಧಿಸಿದ ಪೊಲೀಸರು..!

About The Author