ಬಸವಕಲ್ಯಾಣ: ರಾಜ್ಯ ಸರ್ಕಾರದ ವಿರುದ್ಧ ಬಸವಕಲ್ಯಾಣ ಬಿಜೆಪಿಯ ರೈತ ಮೋರ್ಚಾ ನಗರ ಮತ್ತು ಗ್ರಾಮೀಣ ಮಂಡಳಿ ವತಿಯಿಂದ ಪ್ರತಿಭಟನೆ ರ್ಯಾಲಿ ಕೈಗೊಂಡರು.ಶಾಸಕ ಶರಣು ಸಲಗರ್ ಬಸವಕಲ್ಯಾಣ ಮತಕ್ಷೇತ್ರ ಸೇರಿ ಇಡೀ ಉತ್ತರ ಕರ್ನಾಟಕವನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕೆಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಕೆಲವು ಕಾಂಗ್ರೆಸ್ ಪಕ್ಷದ ಶಾಸಕರಿರುವ ಪ್ರದೇಶಗಳನ್ನು ಮಾತ್ರ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಲು ಸಿದ್ಧವಾಗಿದೆ ಎಂದು ಬಸವಕಲ್ಯಾಣ ಶಾಸಕರು ಆರೊಪ ಮಾಡಿದರು. ಈ ಮತಿಗೆಟ್ಟ, ಕುಲಗೆಟ್ಟ ಸರ್ಕಾರ ರೈತರಲ್ಲಿಯೂ ಭೇದಭಾವ ಮಾಡಿ ರೈತರಿಗೆ ಅನ್ಯಾಯ ಮಾಡುತ್ತಿದೆ
ಡಾ.ಬಾಬಾ ಸಾಹೆಬ್ ಅಂಬೇಡ್ಕರ್ ಹಾಗೂ ವಿಶ್ವಗುರು ಬಸವಣ್ಣನವರ ಹೆಸರು ಹೇಳಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಯಾಗಬೇಕು, ಸುಳ್ಳು ಗ್ಯಾರಂಟಿಗಳ ಭರವಸೆ ನೀಡಿ ನಾಡಿನ ಜನತೆಗೆ ಅನ್ಯಾಯ ಮಾಡಿ ಭಿಕ್ಷುಕ ಸಮಾಜವನ್ನು ನಿರ್ಮಾಣ ಮಾಡುತ್ತಿದ್ದಿರಿ ರೈತರ ಬದುಕಿನ ಜೊತೆ ಆಟ ಆಡಬೇಡಿ ರೈತರ ಶಾಪ ನಿಮಗೆ ತಟ್ಟದೆ ಬಿಡುವುದಿಲ್ಲ
ಮುಂದಿನ 48 ಗಂಟೆಗಳಲ್ಲಿ ಉತ್ತರ ಕರ್ನಾಟಕವನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡದಿದ್ದರೆ ಉಗ್ರ ಹೊರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಬಸವಕಲ್ಯಾಣ ನಗರದ ಬಸವೇಶ್ವರ ವೃತ್ತದಿಂದ ಹಳೆಯ ತಹಸಿಲ್ ಕಚೇರಿಯವರೆಗೆ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.
Bharatha: “ಇಂಡಿಯಾ” ಹೆಸರಿನಿಂದ ಬಿಜೆಪಿಯವರು ಹೆದರಿದ್ದಾರೆ ; ಶೆಟ್ಟರ್..!
Konareddy: ಚಕ್ಕಡಿ ಸರದಾರ ಎಂದು ಬಿರುದು ಪಡೆದುಕೊಂಡ ಶಾಸಕ ಕೋನರೆಡ್ಡಿ..!
Drought: ಬರಗಾಲ ಘೋಷಣೆಗೆ ಒತ್ತಾಯಿಸಿ ಹಸಿರು ಸೇನೆ ವತಿಯಿಂದ ಪ್ರತಿಭಟನೆ..!