ಹುಬ್ಬಳ್ಳಿ : ರಾಜ್ಯ ಗೃಹ ಸಚಿವರಾಗ ಡಾ.ಜಿ ಪರಮೇಶ್ವರ್ ಅವರು ಇಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ದಿಡೀರ್ ಭೇಟಿ ಮಾಡಿರುವುದು ಬಹಳ ಕುತೂಹಲಕ್ಕೆ ಕಾರಣವಾಗಿದೆ. ಠಾಣೆಗೆ ಭೇಟಿ ನೀಡಿದ ಪರಮೇಶ್ವರ್ ಅವರು ಸುಮಾರು ಅರ್ಧ ಗಂಟೆಗಳ ಕಾಲ ಠಾಣೆಯನ್ನು ಪರಿಶೀಲಿಸಿ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡರು.
ದೂರಿಗೆ ಸಂಬಂಧಪಟ್ಟ ಪಾಸ್ ಪೋರ್ಟ್, ಎಫ್ ಐಆರ್ ದಾಖಲಾತಿ ಬಗ್ಗೆ ಮಾಹಿತಿಗಳನ್ನು ಕಲೆಹಾಕಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಶಾಸಕರು ಗಲಾಟೆಯಲ್ಲಿ ಭಾಗಿಯಾದವರಲ್ಲಿ ಕೆಲವರು ಅಮಾಯಕರು ದಯವಿಟ್ಟು ಬಿಡುಗಡೆ ಮಾಡಿಸಿ ಎಂದು ಪತ್ರ ಬರೆಯುವುದರ ಮೂಲಕ ಮನವಿ ಮಾಡಿದ್ದರು.
ಕಳೆದ ವರ್ಷ ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ಮುಂಭಾಗದಲ್ಲಿಯೇ ವ್ಯಾಟ್ಸಪ್ ವಿಚಾರವಾಗಿ ದೊಡ್ಡ ಗಲಾಟೆ ನಡೆದಿತ್ತು. ಈ ಗಲಾಟೆಗೆ ಸಂಬಂಧ ಪಟ್ಟಂತೆ ಸುಮಾರು 150 ಕ್ಕೂ ಹೆಚ್ಚು ಜನರನ್ನು ಜೈಲಿಗೆ ಹಾಕಲಾಗಿತ್ತು. ಆದರೆ ಈಗ ಸಚಿವರ ದಿಡೀರ್ ಭೇಟಿ ಬಹಳ ಕುತೂಹಲಕ್ಕೆ ಕಾರಣವಾಗಿದೆ.
Konareddy: ಚಕ್ಕಡಿ ಸರದಾರ ಎಂದು ಬಿರುದು ಪಡೆದುಕೊಂಡ ಶಾಸಕ ಕೋನರೆಡ್ಡಿ..!
Drought: ಬರಗಾಲ ಘೋಷಣೆಗೆ ಒತ್ತಾಯಿಸಿ ಹಸಿರು ಸೇನೆ ವತಿಯಿಂದ ಪ್ರತಿಭಟನೆ..!