Thursday, February 6, 2025

Latest Posts

Shivaji Circle: ಹುಲಸೂರು ತಾಲೂಕಿನ ಶಿವಾಜಿ ವೃತ್ತದಲ್ಲಿ ಭೀಕರ ಘಟನೆ..!

- Advertisement -

ಬೀದರ್: ಜಿಲ್ಲೆಯ ಹುಲಸೂರು ಪಶು ಸಂಗೋಪನಾ ಇಲಾಖೆಯ ಸಂಚಾರ ತುರ್ತು ಚಿಕಿತ್ಸೆಯ ವಾಹನ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯದಲ್ಲಿ ಬೈಕ್ ಸವಾರ  ಕೊನೆಯುಸಿರೆಳೆದಿದ್ದಾನೆ.

ಹುಲಸೂರು ಪಟ್ಟಣದ ಛತ್ರಪತಿ ಶಿವಾಜಿ ವೃತ್ತದಲ್ಲಿ ದೇವನಾಳ ಗ್ರಾಮದ ರಸ್ತೆಗೆ ತಿರುಗುವಾಗ ಎದುರಿಗೆ ಬಂದ ಬೈಕ್ ಗೆ ಪಶು ಸಂಗೋಪನಾ ವಾಹನ ಡಿಕ್ಕಿ ಹೊಡೆದಿದೆ. ಸಿಸಿ ಟಿವಿಯಲ್ಲಿ ಅಪಘಾತ ನಡೆದ ವೀಡಿಯೋ ಸೆರೆಯಾಗಿದೆ.

ಇನ್ನು ಮೃತ ದುರ್ದೈವಿಯನ್ನು ಹುಲಸೂರು ತಾಲೂಕಿನ ಮಾಚನಾಳ ಗ್ರಾಮದ  ಪ್ರಗತಿಪರ ರೈತನಾದ ಸುರೇಂದ್ರ ಮುದಗಡೆ ಎಂದು ಗುರುತಿಸಲಾಗಿದೆ.

ಅಪಘಾತ ನಡೆದ ಸ್ಥಳದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ ತಕ್ಷಣ ಅವರನ್ನು ಹುಲಸೂರು ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು ಹೆಚ್ಚಿನ ಚಿಕಿತ್ಸೆಗಾಗಿ ಕಲ್ಬುರ್ಗಿ  ಆಸ್ಪತ್ರೆಗೆ ತೆರಳುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.

Dr.G.Parameshwar: ಹುಬ್ಬಳ್ಳಿ ಠಾಣೆಗೆ ಗೃಹ ಮಂತ್ರಿಗಳ ದಿಡೀರ್ ಭೇಟಿ..!

 

- Advertisement -

Latest Posts

Don't Miss