Banglore News : ನಮ್ಮ ಸರ್ಕಾರಿ ಶಾಲೆಗಳಲ್ಲಿ ಓದಿ ಸಾಧನೆಗೈದ ಸಾಧಕರ ಬಗ್ಗೆ ನಮ್ಮ ಮಕ್ಕಳಿಗೆ ಪ್ರೇರಣೆಯಾಗುವಂತೆ ಹೇಳುವಂತಹ ಕೆಲಸ ಆಗಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.
ಇಂದು ಚಾಮರಾಜಪೇಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಆಯೋಜಿಸಲಾಗಿದ್ದ ಸಸ್ಯ ಶ್ಯಾಮಲ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು. ಕೆಂಗಲ್ ಹನುಮಂತಯ್ಯ ಅವರಿಂದಲೇ ನಾವು ಇಂದು ಸಚಿವರಾಗಿ ಇಲ್ಲಿಗೆ ಬಂದಿದ್ದೇವೆ. ಅಂತಹ ಮಹಾನ್ ನಾಯಕರ ಬಗ್ಗೆ ಮಕ್ಕಳಿಗೆ ಪಾಠ ನಾಡಬೇಕು. ಸರ್ಕಾರಿ ಶಾಲೆಗಳಲ್ಲಿ ಓದಿದ ಸಾಹಿತಿಗಳು, ಸಾಧಕರ ಬಗ್ಗೆ ತಿಳಿ ಹೇಳಬೇಕು. ಸರ್ಕಾರಿ ಶಾಲೆಗಳ ಬಗ್ಗೆ ಗೌರವ ಹೆಚ್ಚಿಸುವ ಕೆಲಸ ಇದರಿಂದಾಗುತ್ತದೆ ಎಂದರು.
ಮನುಷ್ಯ ತನ್ನ ಜೀವನ ರೂಪಿಸಿಕೊಳ್ಳಲು ಅವಶ್ಯಕವಾಗಿರುವ, ಅರ್ಥಪೂರ್ಣ ಕಾರ್ಯಕ್ರಮವನ್ನು ಸಚಿವರು ಆಯೋಜನೆ ಮಾಡಿದ್ದಾರೆ. ಹೀಗಾಗಿ ಅವರಿಗೆ ನಾನು ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ. ಶಾಲೆಗಳಲ್ಲಿ 25 ಲಕ್ಷ ಸಸಿಗಳನ್ನು ನೆಡುವ ಕೆಲಸ ಮಾಡುತ್ತಿದ್ದಾರೆ. ಆ ಸಸಿಗಳು ಮರವಾಗಿ ಬೆಳೆಯಬೇಕು. ಮಕ್ಕಳು ಕೂಡ ಉತ್ತಮ ಶಿಕ್ಷಣ ಪಡೆದು ಮಹಾನ್ಬಸಾಧಕರಾಗಿ ಹೊರಹೊಮ್ಮಲಿ ಎಂದರು.
ಅರಣ್ಯ ತಾಯಿ ಇದ್ದಂತೆ. ತಾಯಿಗೆ ಎಷ್ಟೇ ತೊಂದರೆ ಕೊಟ್ಟರು ನಮಗೆ ತಾಯಿ ಒಳ್ಳೆಯದನ್ನು ಮಾಡುತ್ತಾಳೆ. ಹಾಗೇ ಅರಣ್ಯದ ಮೇಲೆ ನಾವು ಎಷ್ಟೇ ಹಾನಿ ಮಾಡಿದರೂ, ಅದು ನಮಗೆ ಒಳ್ಳೆಯದನ್ನೇ ಮಾಡುತ್ತದೆ. ನಾವು ನಮ್ಮ ಸ್ವಾರ್ಥಕ್ಕಾಗಿ ಭೂಮಿಯನ್ನು ಅಗೆಯುತ್ತೇವೆ. ಪ್ರಕೃತಿಯಲ್ಲಿನ ಮರಗಳನ್ನು ನಾಶ ಮಾಡುತ್ತೇವೆ. ಆದರೂ ಪ್ರಕೃತಿ ನಮಗೆ ಯಾವಾಗಲೂ ಪ್ರೀತಿ ತೋರುತ್ತಲೇ ಇರುತ್ತದೆ ಎಂದರು.
ಹಾಗೇ ಮಕ್ಕಳು ಉತ್ತಮವಾದ ಶಿಕ್ಷಣ ಪಡೆದು ಉತ್ತಮ ಸಾಧನೆ ಮಾಡಿ ತಾವು ಕಲಿತ ಶಾಲೆಗಳಿಗೆ ಗೌರವ ತರಬೇಕು ಎಂದರು. ಈ ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಆಯುಕ್ತರಾದ ಬಿ ಬಿ ಕಾವೇರಿ, ಇಲಾಖೆಯ (ಪ್ರೌಢ ಶಿಕ್ಷಣ) ನಿರ್ದೇಶಕರಾದ ಕೃಷ್ಣಾಜಿ ಕರಿಚನ್ನಣ್ಣವರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Mark Rutte : ಜನರೊಂದಿಗೆ ಸರಳವಾಗಿ ಬೆರೆತ ನೆದರ್‌ಲ್ಯಾಂಡ್ಸ್ ಪ್ರಧಾನಿ : ಸಾರ್ವಜನಿಕರೊಂದಿಗೆ ಸೆಲ್ಫಿ
Prajwal Revanna : ಸಂಸದ ಪ್ರಜ್ವಲ್ ರೇವಣ್ಣ ಆಯ್ಕೆ ಅಸಿಂಧು ಆದೇಶ ಅಮಾನತು ಅರ್ಜಿ ವಜಾಗೊಳಿಸಿದ ಹೈಕೋರ್ಟ್




