Technology News : ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಕೆಲವಾರು ವರ್ಷಗಳಿಂದ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ ಈಗ ಡೀಸೆಲ್ ಕಾರುಗಳ ಮೇಲೆ ಇನ್ನಷ್ಟು ನಿರ್ಬಂಧಗಳನ್ನು ಹಾಕಲು ಮುಂದಾಗಿರುವಂತಿದೆ.
ವರದಿ ಪ್ರಕಾರ ಸರ್ಕಾರ ಡೀಸೆಲ್ ಕಾರುಗಳ ಮೇಲೆ ಶೇ. 10ರಷ್ಟು ತೆರಿಗೆ ಹೆಚ್ಚಳ ಮಾಡಲು ಯೋಜಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ನಿಟ್ಟಿನಲ್ಲಿ ಸುಳಿವು ನೀಡಿದ್ದಾರೆ.
ಡೀಸೆಲ್ ಕಾರು ತಯಾರಿಕೆಯನ್ನು ನಿಲ್ಲಿಸುವಂತೆ ಅವರು ವಾಹನ ತಯಾರಕ ಕಂಪನಿಗಳಿಗೆ ಸೂಚ್ಯವಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಡೀಸೆಲ್ ಕಾರು ಇನ್ನಷ್ಟು ದುಬಾರಿಯಾಗಲಿದೆ ಎಂದು ಹೇಳಲಾಗಿದೆ.
ಡೀಸೆಲ್ ಕಾರುಗಳ ಉತ್ಪಾದನೆ ನಿಲ್ಲಿಸಬೇಕು. ಇಲ್ಲದಿದ್ದರೆ ಡೀಸೆಲ್ ವಾಹನ ಮಾರುವುದೇ ಕಷ್ಟವಾಗುವ ರೀತಿಯಲ್ಲಿ ತೆರಿಗೆ ವಿಧಿಸಲಾಗುವುದು ಎಂದು ನಿತಿನ್ ಗಡ್ಕರಿ ನವದೆಹಲಿಯಲ್ಲಿ ತಿಳಿಸಿದ್ದಾರೆ. ಡೀಸೆಲ್ ವಾಹನಗಳ ಮೇಲೆ ಜಿಎಸ್ಟಿ ತೆರಿಗೆಯನ್ನು ಶೇ. 10ರಷ್ಟು ಹೆಚ್ಚು ಮಾಡಲು ಪ್ರಸ್ತಾಪಿಸಿದ್ದಾರೆ. ಈ ಕ್ರಮ ಜಾರಿಯಾದರೆ ಡೀಸೆಲ್ ವಾಹನಗಳ ಬೆಲೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗಿದೆ.
Airport : ಬೆಂಗಳೂರು : ಟರ್ಮಿನಲ್-2 ನಿಂದ ವಿದೇಶಿ ವಿಮಾನಗಳ ಹಾರಾಟಕ್ಕೆ ಚಾಲನೆ
Bank Officer : ಮಂಗಳೂರು ಸ್ವಿಮ್ಮಿಂಗ್ ಪೂಲ್ ನಲ್ಲಿ ಕೇರಳ ಮೂಲದ ಬ್ಯಾಂಕ್ ಅಧಿಕಾರಿ ಶವ ಪತ್ತೆ..?!
Siddaramaiah : ಬಾಲಕನನ್ನು ಶಾಲೆಗೆ ಸೇರಿಸಿದ ಸಿಎಂ ಸಿದ್ದರಾಮಯ್ಯ..! ಕಾರಣ ಇಷ್ಟೇ..?!