- Advertisement -
ಕರ್ನಾಟಕ ಟಿವಿ : ಟ್ರಂಪ್ ಹುಚ್ಚಾಟಕ್ಕೆ ಅಮೆರಿಕಾ ಶ್ಮಶಾನವಾಯ್ತು.. ನಮ್ಮಲ್ಲಿ ಮಮತಾ ಬ್ಯಾನರ್ಜಿಯ ಬೇಜವಾಬ್ದಾರಿ ತನಕ್ಕೆ ಪಶ್ಚಿಮ ಬಂಗಾಳ ಸ್ಮಶಾನವಾಗ್ತಿದೆ. ಕೇಂದ್ರ ಸರ್ಕಾರದ ಜೊತೆ ಸದಾ ಗಲಾಟೆ ಗದ್ದಲ ಮಾಡಿಕೊಳ್ಳುವ ಮಮತಾ ಕೊರೊನಾ ನಿಗ್ರಹ ಮಾಡುವಲ್ಲಿ ತೋರಿದ ಬೇಜವಾಬ್ದಾರಿಯಿಂದ 3ನೇ ತಾರೀಖು 33 ಇದ್ದ ಕೊರೊನಾ ಸಾವಿನ ಸಂಖ್ಯೆ 133ಕ್ಕೆ ಏರಿಕೆಯಾಗಿದೆ.. ಅಂದ್ರೆ 48 ಗಂಟೆಯಲ್ಲಿ 100 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ..
ಹಾಗೆಯೇ 24 ಗಂಟೆಯಲ್ಲಿ 296 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಬಂಗಾಳದ ಎನ್ ಜಿಓ ಹಾಗೂ ಹಲವು ವಿಪಕ್ಷ ನಾಯಕರು ಕೇಂದ್ರ ಸರ್ಕಾರ ಶೀಘ್ರವೇ ಮಧ್ಯಪ್ರವೇಶ ಮಾಡಿ ಸೋಂಕಿತರನ್ನ ಆದಷ್ಟು ಬೇಗ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಒತ್ತಾಯಿಸಿದ್ದಾರೆ..
ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ
- Advertisement -