Tuesday, September 23, 2025

Latest Posts

Army Dog : ಸೈನಿಕನ ರಕ್ಷಣೆಗೆ ಹೋಗಿ ಗುಂಡಿಗೆ ಬಲಿಯಾದ ಸೇನಾ ಶ್ವಾನ

- Advertisement -

National News : ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಭಾರತೀಯ ಸೇನೆ ಶ್ವಾಮ ಕೆಂಟ್ ಮೃತಪಟ್ಟಿದೆ. 6 ವರ್ಷದ ಕೆಂಟ್ 21 ನೇ ಆರ್ಮಿ ಡಾಗ್ ಯುನಿಟ್‌ನ ಹೆಣ್ಣು ಲ್ಯಾಬ್ರಡಾರ್ ತಳಿಯದ್ದು. ನಾರ್ಲಾ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಉಗ್ರರು ಮತ್ತು ಭದ್ರತಾ ಪಡೆಗಳ ಎನ್‌ಕೌಂಟರ್ ನಡುವೆ ಗುಂಡಿನ ದಾಳಿಯಿಂದ ತನ್ನ ಜೊತೆಗಿದ್ದ ಸೈನಿಕನನ್ನು ರಕ್ಷಿಸಲು ಹೋಗಿ ಗುಂಡೇಟಿಗೆ ಬಲಿಯಾಗಿದೆ ಎಂದು ಹೇಳಲಾಗಿದೆ.

ಗುಂಡಿನ ಚಕಮಕಿ ನಡೆಯುವ ಮುನ್ನ ಕೆಂಟ್ ಉಗ್ರರ ಜಾಡನ್ನು ಹಿಡಿದು ಮುಂದೆ ಸಾಗುತ್ತಿತ್ತು ಈ ವೇಳೆ ಗುಂಡಿನ ದಾಳಿಯಲ್ಲಿ ಕೆಂಟ್ ಸಿಲುಕಿಕೊಂಡಿದೆ. ಕೆಂಟ್ ಗುಂಡಿನ ದಾಳಿಯಿಂದ ತನ್ನ ಜತೆಗಿದ್ದ ಹ್ಯಾಂಡ್ಲರ್ ನ ಪ್ರಾಣವನ್ನು ರಕ್ಷಿಸಿ ಗುಂಡೇಟು ತಿಂದು ಸಾವನ್ನಪ್ಪಿದೆ ಎಂದು ಹೇಳಲಾಗಿದೆ.

ಆಪರೇಷನ್ ಸುಜಲಿಗಾಲ’ ದಲ್ಲಿ ಕೆಂಟ್ ಸೇರಿದಂತೆ ಎನ್ ಕೌಂಟರ್ ನಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ. ವಿಶೇಷ ಪೊಲೀಸ್ ಅಧಿಕಾರಿ ಸೇರಿ ಮೂವರು ಯೋಧರು ಗಾಯಗೊಂಡಿದ್ದಾರೆ.ಭದ್ರತಾ ಪಡೆಯ ಗುಂಡಿನ ಕಾಳಗದಲ್ಲಿ ಓರ್ವ ಉಗ್ರ ಹತನಾಗಿದ್ದು, ಉಳಿದ ಉಗ್ರರು ಪರಾರಿ ಆಗಿದ್ದಾರೆ ಎಂಬುವುದಾಗಿ ಮಾಹಿತಿ ಇದೆ.

Scrape: ಗುಜರಿ ವಸ್ತು ಮಾರಾಟ; ಕೇಂದ್ರ ಸರ್ಕಾರಕ್ಕೆ ಕೋಟಿಗಟ್ಟಲೆ ಲಾಭ..!

Car : ಡೀಸೆಲ್ ಕಾರು ಇನ್ನಷ್ಟು ದುಬಾರಿ..?!: ಶೇ.10ರಷ್ಟು ತೆರಿಗೆ ಹೆಚ್ಚಳ..!

Nipah Virus : ಕೇರಳದಲ್ಲಿ ಮತ್ತೆ ನಿಫಾ ಆತಂಕ …!

- Advertisement -

Latest Posts

Don't Miss