Film News : ಡಿ ಬಾಸ್ ಸಿನಿಮಾ ಮಾತ್ರವಲ್ಲ, ಪ್ರಾಣಿ ಪ್ರೇಮಿ, ಇದೀಗ ದಾಸ ಕೃಷಿ ವಿಚಾರದಲ್ಲಿಯೂ ಸುದ್ದಿಯಲ್ಲಿದ್ದಾರೆ. ಇನ್ನೇನು ಕಾಟೇರ ಸಿನಿಮಾ ರಿಲೀಸ್ ಗೆ ಸಜ್ಜಾಗಿರೋ ದಚ್ಚು ಕೃಷಿ ವಿಚಾರಕ್ಕೆ ಸುದ್ದಿಯಾಗಿರೋದು ಹೇಗೆ ಏನಿದು ಅಸಲಿ ಸ್ಟೋರಿ ಹೇಳ್ತೀವಿ ನೋಡಿ.
ಸಿನಿಮಾ ಬಿಟ್ಟು ಸಾಕಷ್ಟು ವಿಚಾರಗಳಿಂದ ನಟ ದರ್ಶನ್ ಪದೇ ಪದೆ ಸುದ್ದಿಯಲ್ಲಿ ಇರುತ್ತಾರೆ. ತಮ್ಮ ಪ್ರಾಣಿ-ಪಕ್ಷಿ ಪ್ರೀತಿ, ಕಾರ್, ಬೈಕ್, ಕುದುರೆ ಕ್ರೇಜ್‌ನಿಂದಲೂ ಗಮನ ಸೆಳೆಯುತ್ತಾರೆ. ಇನ್ನು ಕರ್ನಾಟಕದ ಅರಣ್ಯ ಇಲಾಖೆ ಹಾಗೂ ಕೃಷಿ ಇಲಾಖೆ ರಾಯಭಾರಿ ಆಗಿಯೂ ದರ್ಶನ್ ಸೇವೆ ಸಲ್ಲಿಸುತ್ತಿದ್ದಾರೆ.
ಅಭಿಮಾನಿಗಳು ಖುಷಿ ಪಡೋಕೆ ಒಂದೊಳ್ಳೆ ಸುದ್ದಿ ಸಿಕ್ಕಿದೆ. ಧಾರಾವಾಡ ಕೃಷಿ ಮೇಳದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ದರ್ಬಾರ್ ನಡೀತಿದೆ.
ಧಾರಾವಾಡದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ರೈತರ ರಾಯಭಾರಿ ಡಿ ಬಾಸ್ ಸ್ಟ್ಯಾಚು ಎಲ್ಲರ ಗಮನ ಸೆಳೆಯುತ್ತಿದೆ. ಕೃಷಿಮೇಳದಲ್ಲಿ ಈ ರೀತಿ ಸಿನಿಮಾ ನಟನ ಕಲಾಕೃತಿ ಇಟ್ಟಿರುವುದು ವಿಶೇಷ . ಹಾವೇರಿ ಉತ್ಸವ ರಾಕ್ ಗಾರ್ಡನ್ ಪ್ರದರ್ಶನದ ಮುಂಭಾಗದಲ್ಲಿ ದರ್ಶನ್ ಕಲಾಕೃತಿ ಹಾಕಲಾಗಿದೆ.
ರೈತರ ಹಿತಕ್ಕಾಗಿ ಕೃಷಿ ಇಲಾಖೆ ಕೈಗೊಳ್ಳುವ ಕಾರ್ಯಕ್ರಮಗಳನ್ನು ಪ್ರಚಾರಪಡಿಸಲು ಹಾಗೂ ರೈತರಲ್ಲಿ ಸ್ಪೂರ್ತಿ ತುಂಬಲು 2 ವರ್ಷಗಳ ಹಿಂದೆ ರಾಜ್ಯ ಸರ್ಕಾರ ದರ್ಶನ್ ಅವರನ್ನು ಕೃಷಿ ಇಲಾಖೆ ರಾಯಭಾರಿ ಆಗಿ ನೇಮಿಸಿತ್ತು.
ಸೆಪ್ಟೆಂಬರ್ 9 ರಿಂದ 4 ದಿನಗಳ ಕಾಲ ಧಾರವಾಡದಲ್ಲಿ ಕೃಷಿ ಮೇಳ ನಡೆದಿದೆ. ಧಾರವಾಡ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿರುವ ‘ಕೃಷಿ ಮೇಳ-2023’ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಈ ಬಾರಿ ಮೇಳದಲ್ಲಿ ಫಲಪುಷ್ಪ ಹಾಗೂ ಕೀಟ ಪ್ರಪಂಚದ ದರ್ಶನ ಮಾಡಿಸಲಾಗುತ್ತಿದೆ.
ದರ್ಶನ್ ‘ರಾಬರ್ಟ್’ ಚಿತ್ರದಲ್ಲಿ ಬೈಕ್ ಏರಿ ಕುಳಿತ ಲುಕ್‌ನ ಕಲಾಕೃತಿಯನ್ನು ನಿರ್ಮಿಸಿ ಕೃಷಿಮೇಳದಲ್ಲಿ ಇಡಲಾಗಿದೆ. ಅದರ ಫೋಟೊಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.