Film News : ಡಿ ಬಾಸ್ ದಚ್ಚು ಬಹು ನಿರೀಕ್ಷೆಯ ಸಿನಿಮಾ ಕಾಟೇರ ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ಇದರ ಬೆನ್ನಲ್ಲೇ ಇದೀಗ ದಚ್ಚು ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಸ್ನೇಹಿತರಿಬ್ಬರು ಮತ್ತೆ ಈ ಸಿನಿಮಾದಲ್ಲಿ ಒಂದಾಗ್ತಾರಂತೆ ಹಾಗಿದ್ರೆ ಯಾರು ದಚ್ಚು ಆ ಸ್ನೇಹಿತ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್.
ಸ್ಯಾಂಡಲ್‌ವುಡ್‌ನಲ್ಲಿ ‘ಕಾಟೇರ’ನ ಆರ್ಭಟ ಶುರುವಾಗುತ್ತಿದೆ. ಗಣೇಶ ಹಬ್ಬಕ್ಕೆ ಸಿನಿಮಾ ಟೀಸರ್ ರಿಲೀಸ್ ಆಗುತ್ತದೆ ಎನ್ನಲಾಗ್ತಿದೆ. ‘ಕಾಟೇರ’ ಬಳಿಕ ದರ್ಶನ್ ಮತ್ತೆರಡು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದೀಗ ತನ್ನ ಸ್ನೇಹಿತನೊಂದಿಗೆ ಮತ್ತೊಂದು ಸಿನಿಮಾ ಮಾಟ್ತಿದ್ದಾರಂತೆ ದಚ್ಚು.
ಹೌದು ದರ್ಶನ್ ಹಾಗೂ ವಿನೋದ್ ಪ್ರಭಾಕರ್ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ‘ನವಗ್ರಹ’ ಸಿನಿಮಾದಲ್ಲಿ ಇವರು ಒಟ್ಟಾಗಿ ನಟಿಸಿದ್ದರು. ಆ ಬಳಿಕ ಇವರು ಬಣ್ಣ ಹಚ್ಚಿದ ಸಿನಿಮಾ ಎಂದರೆ ‘ರಾಬರ್ಟ್’. ಈ ಚಿತ್ರದಲ್ಲಿ ವಿನೋದ್ ಅವರಿಗೆ ಪ್ರಮುಖ ಪಾತ್ರವೇ ಸಿಕ್ಕಿತ್ತು. ಈಗ ಅವರಿಬ್ಬರು ಮತ್ತೊಮ್ಮೆ ಒಂದಾಗುತ್ತಿದ್ದಾರೆ.
‘ನವಗ್ರಹ’ ಸಿನಿಮಾದಲ್ಲಿ ಇವರು ಒಟ್ಟಾಗಿ ನಟಿಸಿದ್ದರು ಇವರು. ಆ ಬಳಿಕ ಇವರು ಬಣ್ಣ ಹಚ್ಚಿದ ಸಿನಿಮಾ ಎಂದರೆ ‘ರಾಬರ್ಟ್’. ಈ ಚಿತ್ರದಲ್ಲಿ ವಿನೋದ್ ಅವರಿಗೆ ಪ್ರಮುಖ ಪಾತ್ರವೇ ಸಿಕ್ಕಿತ್ತು.
ಈಗ ಅವರಿಬ್ಬರು ಮತ್ತೊಮ್ಮೆ ಒಂದಾಗುತ್ತಿದ್ದಾರೆ. ‘ಫೈಟರ್’ ಸಿನಿಮಾದಲ್ಲಿ ವಿನೋದ್ ನಟಿಸಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಚಾರ ರಿವೀಲ್ ಮಾಡಿದ್ದಾರೆ. ಈ ಬಗ್ಗೆ ವಿನೋದ್ ಪ್ರಭಾಕರ್ ಮಾತನಾಡಿದ್ದಾರೆ. ‘ನನ್ನ ದರ್ಶನ್ ಕಾಂಬಿನೇಷನ್ನಲ್ಲಿ ಮತ್ತೊಂದು ಸಿನಿಮಾ ಬರುತ್ತದೆ. ಅದು ಸೀಕ್ರೆಟ್ ಆಗಿದೆ’ ಎಂದಿದ್ದಾರೆ ವಿನೋದ್. ಒಟ್ಟಾರೆ ಇವರಿಬ್ಬರ ಕಾಂಬಿನೇಷನ್ ನ ಮೂವಿಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.