Tuesday, December 24, 2024

Latest Posts

Whale : ಹೊನ್ನಾವರ : ಒಂದೇ ವಾರದ ಅಂತರದಲ್ಲಿ 2 ತಿಮಿಂಗಳ ಸಾವು

- Advertisement -

Honnavara News : ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಡಲತೀರದಲ್ಲಿ ಒಂದೇ ವಾರದ ಅಂತರದಲ್ಲಿ ಎರಡು ಭಾರೀ ಗಾತ್ರದ ಹಾಗೂ ಒಂದು ಮರಿ ತಿಮಿಂಗಿಲದ ಕಳೇಬರ ಪತ್ತೆಯಾಗಿದೆ. ಸಪ್ತ ಸಾಗರಗಳನ್ನ ದಾಟಿ ಹೊನ್ನಾವರದ ಅರಬ್ಬೀ ವ್ಯಾಪ್ತಿಯಲ್ಲೇ ಮೂರು ತಿಮಿಂಗಿಲಗಳ ಕಳೇಬರ ಪತ್ತೆಯಾಗಿರುವುದು ಕಡಲ ಶಾಸ್ತ್ರಜ್ಞರ ಕಳವಳಕ್ಕೂ ಕಾರಣವಾಗಿದೆ.

ಕಳೆದ ಭಾನುವಾರ ಹೊನ್ನಾವರದ ಮುಗಳಿ ಬೀಚ್‌ನಲ್ಲಿ ಸಮುದ್ರದಿಂದ ದಡಕ್ಕೆ ಸುಮಾರು 35 ಮೀ. ಉದ್ದದ ತಿಮಿಂಗಿಲ ಮೃತಪಟ್ಟು ಹಲವು ದಿನಗಳಾಗಿ ಕೊಳೆತ ಬಳಿಕ ಸಮುದ್ರದ ಅಲೆಗಳ ಹೊಡೆತಕ್ಕೆ ದಡಕ್ಕೆ ತೇಲಿ ಬಂದಿತ್ತು. ಹೊನ್ನಾವರ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅದರಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಳೆಬರಹವನ್ನ ಪರಿಶೀಲಿಸಿ ಮರಣೋತ್ತರ ಪರೀಕ್ಷೆಗೆ ನೀಡಿದ್ದರು. ಇದೀಗ ಇಂದು ಬೆಳಿಗ್ಗೆ ಹೊನ್ನಾವರದ ಟೊಂಕಾ ಕಾಸರಕೋಡು ಬೀಚ್ ನಲ್ಲಿ ಹೆಣ್ಣು ತಿಮಿಂಗಿಲದ ಕಳೇಬರ ಪತ್ತೆಯಾಗಿದೆ.

ಇದು ಕೂಡ ಭಾರೀ ಗಾತ್ರದ್ದಾಗಿದ್ದು, ಸುಮಾರು 25 ಮೀ. ಉದ್ದವಿದೆ ಎನ್ನಲಾಗಿದೆ. ಆದರೆ ಅರಣ್ಯಾಧಿಕಾರಿಗಳು ಹಾಗೂ ಕಡಲ ವಿಜ್ಞಾನಿಗಳು ಪರಿಶೀಲನೆಗೆ ತೆರಳಿದ್ದ ವೇಳೆ ಈ ಹೆಣ್ಣು ತಿಮಿಂಗಿಲ ಸಿಕ್ಕ ಅನತಿ ದೂರದಲ್ಲೇ ಇನ್ನೊಂದು ಮರಿ ತಿಮಿಂಗಿಲದ ಕಳೇಬರ ಸಿಕ್ಕಿದೆ ಎನ್ನಲಾಗಿದೆ. ಸದ್ಯ ಇವೆರಡೂ ತಿಮಿಂಗಿಲಗಳ ಕಳೇಬರವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗುತ್ತಿದ್ದು, ಮರಣೋತ್ತರ ಪರೀಕ್ಷಾ ವರದಿಯ ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಬೇಕಿದೆ.

Water Tank : ಉದ್ಘಾಟನೆಗೂ ಮುನ್ನವೇ ಸೋರುತ್ತಿರುವ ವಾಟರ್ ಟ್ಯಾಂಕ್..!

Govt school: ಅಭಿವೃದ್ದಿಯಿಂದ ವಂಚಿತವಾದ ಸರ್ಕಾರಿ ಶಾಲೆಗಳು..!

Kumbamela ; ಶ್ರಾವಣ ಮಾಸದ ಕುಂಭಮೇಳ

- Advertisement -

Latest Posts

Don't Miss