Bagevadi News : ಪ್ರತಿಷ್ಠಿತ ಗೋಲ್ಡ್ ಮತ್ತು ಡೈಮಂಡ್ಸ್ ಜುವೆಲ್ಲರಿ ಕಂಪನಿ ಜೊಯ್ ಆಲುಕ್ಕಾಸ್ ಇವರ ವತಿಯಿಂದ ಹಿರೇ ಬಾಗೇವಾಡಿ ಗ್ರಾಮದಲ್ಲಿ ಸುಮಾರು 7 ಲಕ್ಷ ರೂ,ಗಳ ವರೆಗೆ ಕಡು-ಬಡವರಿಗಾಗಿ ನಿರ್ಮಿಸಿದ ಮನೆಗಳ ಕೀ ಹಸ್ತಾಂತರ ಕಾರ್ಯಕ್ರಮದಲ್ಲಿ ಸಚಿವೆ ಲಕ್ಷೀ ಹೆಬ್ಬಾಲ್ಕರ್ ಭಾಗವಹಿಸಿ, ಕೀ ಹಸ್ತಾಂತರಿಸಿದರು.
ಜೊಯ್ ಆಲುಕ್ಕಾಸ್ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿರುವ ಈ ಕೆಲಸ ಸ್ವಾಗತಾರ್ಹ, ಕಡು-ಬಡವರ ಪರಿಸ್ಥಿತಿಯನ್ನು ಅರಿತಿರುವ ಜೊಯ್ ಆಲುಕ್ಕಾಸ್ ಫೌಂಡೇಷನ್ ಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಜೊಯ್ ಆಲುಕ್ಕಾಸ್ ಫೌಂಡೇಷನ್ ನ ಈ ಮಹತ್ತರ ಕಾರ್ಯ ಇತರ ಕಂಪನಿಗಳಿಗೆ ಮಾದರಿಯಾಗಲಿ ಹಾಗೂ ಕಡು-ಬಡವರಿಗೆ ಸಹಾಯ ಮಾಡುವಂತಾಗಲಿ ಎಂದು ಆಶಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮದ ಗುರು ಹಿರಿಯರು, ಜೊಯ್ ಆಲುಕ್ಕಾಸ್ ನ ರೀಜನಲ್ ಮ್ಯಾನೆಜರ್ ಜಿನೇಶ್, ದರ್ಗಾ ಅಜ್ಜನವರಾದ ಅಶ್ರಫ್ ಪೀರ್ ಖಾದ್ರಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸ್ಮೀತಾ ಪಾಟೀಲ, ಸಿ ಸಿ ಪಾಟೀಲ ಅಣ್ಣ, ಬಿ ಎನ್ ಪಾಟೀಲ, ಸಮೀನಾ ನದಾಫ್, ಬಿ ಆರ್ ಪಾಟೀಲ, ಸದ್ದಾಂ ನದಾಫ್, ಸೈಯದ್ ಸನದಿ, ಕತಾಲ್ ಗೋವೆ, ಆನಂದ ಪಾಟೀಲ, ಮಹಮ್ಮದ್ ಗೌಸ್ ಬಂಕಾಪುರ ಹಾಗೂ ಜೊಯ್ ಆಲುಕ್ಕಾಸ್ ಫೌಂಡೇಷನ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
Eshwar Khandre : ಜಿಲ್ಲಾ, ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಈಶ್ವರ್ ಖಂಡ್ರೆ
Farmers: ಒನ್ಟೈಮ್ ಸೆಟಲ್ಮೆಂಟ್ಗೆ ಸ್ಪಂದಿಸದ ಆರೋಪ! ಬ್ಯಾಂಕ್‌ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ರೈತರು..!