National News : ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ಎನ್ಕೌಂಟರ್ ನಡೆಸಿದ್ದು, ಮೂವರು ಉಗ್ರರನ್ನು ಹತ್ಯೆ ಮಾಡಿದೆ.
ಬಾರಾಮುಲ್ಲಾ ಜಿಲ್ಲೆಯ ಉರಿಯಲ್ಲಿ ಭಯೋತ್ಪಾದಕರು ಮತ್ತು ಸೇನಾಪಡೆ ನಡುವೆ ಇಂದು ಬೆಳಿಗ್ಗೆ ಎನ್‌ಕೌಂಟರ್ ನಡೆದಿದೆ. ಈ ವೇಳೆ ಸೇನಾಪಡೆಗಳ ಕಾರ್ಯಾಚರಣೆಗೆ ಬಾರಾಮುಲ್ಲಾ ಪೊಲೀಸರು ಕೂಡ ಕೈಜೋಡಿಸಿದ್ರು. ಈ ವೇಳೆ ಉಗ್ರರ ಅಡಗಿ ಕುಳಿತಿರುವ ಸ್ಥಳವನ್ನು ಸುತ್ತುವರೆದ ಪೊಲೀಸರು ಹಾಗೂ ಸೇನಾಪಡೆ ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಸ್ಥಳದಲ್ಲಿ ಇನ್ನೂ ಕೆಲ ಉಗ್ರರು ಅಡಗಿ ಕುಳಿತಿದ್ದು, ಉಗ್ರರ ಹೆಡೆಮುಡಿ ಕಟ್ಟಲು ಕಾರ್ಯಾಚರಣೆ ಮುಂದುವರೆದಿದೆ.
ಇನ್ನೊಂದೆಡೆ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ನಲ್ಲಿ ನಡೆಯುತ್ತಿರುವ ಎನ್‌ಕೌಂಟರ್ ಶನಿವಾರ 5ನೇ ದಿನಕ್ಕೆ ಕಾಲಿಟ್ಟಿದೆ. ಭಯೋತ್ಪಾದಕರ ಪತ್ತೆಗೆ ಡ್ರೋಣ್ಗಳನ್ನು ಕೂಡ ಬಳಸಲಾಗುತ್ತಿದೆ. ಅನಂತನಾಗ್‌ನಲ್ಲಿ ಕಳೆದ 4 ದಿನಗಳಿಂದ ನಡೆಯುತ್ತಿರುವ ಎನ್ಕೌಂಟರ್ನಲ್ಲಿ ಉಗ್ರರ ಗುಂಡಿನ ದಾಳಿಗೆ ಒಟ್ಟು ನಾಲ್ವರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ.
ಈ ಕುರಿತಾದ ಕಂಪ್ಲೀಟ್ ಮಾಹಿತಿ ಕರ್ನಾಟಕ ಟಿವಿಯ ಪ್ರೈಮ್ ಟೈಮ್ ವೀಡಿಯೋದಲ್ಲಿ ಇಲ್ಲಿದೆ ನೋಡಿ…
Speech : ಹಿಂದೂ ಧರ್ಮ ನಾಶಪಡಿಸುವುದು ಹೇಗೆ ಎಂದು ಭಾಷಣ ಬರೆಯಿರಿ..?! ಏನಿದು ಸುತ್ತೋಲೆ..?!
Mathsya yojana : ಸಮುದ್ರದ ಆಳದತ್ತ ಭಾರತದ ಚಿತ್ತ..! : ಏನಿದು ಮತ್ಸ್ಯ ಯೋಜನೆ ..?!
Alien : ಅನ್ಯಗ್ರಹ ಜೀವಿಗಳು ಇವೆಯಾ ಇಲ್ವಾ..?! ಏನಿದು ಏಲಿಯನ್ ಚರಿತ್ರೆ ಚರ್ಚೆ…?!