Thursday, July 24, 2025

Latest Posts

Chaithra Kundapura : ಹಣ ಪಡೆದಿದ್ದಾಗಿ ಒಪ್ಪಿಕೊಂಡರಂತೆ ಚೈತ್ರಾ ಕುಂದಾಪುರ

- Advertisement -

State News : ಬಿಜೆಪಿ ಟಿಕೆಟ್‌ಗಾಗಿ 5 ಕೋಟಿ ವಂಚನೆ ಪ್ರಕರಣದಲ್ಲಿ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಸ್ಫೋಟಕ ಮಾಹಿತಿಯನ್ನು ಬಾಯ್ಬಿಟ್ಟಿದ್ದಾರೆ. ಸಿಸಿಬಿ ಪೊಲೀಸರು ಸಾಕ್ಷ್ಯಗಳನ್ನು ಮುಂದಿಟ್ಟು ಪ್ರಶ್ನೆ ಮಾಡಿದಾಗ ವಂಚನೆ ಪ್ರಕರಣದ ಅಸಲಿಯತ್ತು ಬಯಲಾಗಿದ್ಯಂತೆ. ತಪ್ಪೊಪ್ಪಿಕೊಂಡಿರುವ ಚೈತ್ರಾ ಕುಂದಾಪುರ ಸಿಸಿಬಿ ಎದುರು ಸತ್ಯ ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ.

ಈ ವೇಳೆ ತಪ್ಪೊಪ್ಪಿಕೊಂಡಿರುವ ಚೈತ್ರಾ ಕುಂದಾಪುರ ಈ ಪ್ರಕರಣದ ರೂವಾರಿ ನಾನು ಹಾಗೂ ಶ್ರೀಕಾಂತ್ ಪೂಜಾರಿ ಎಂದಿದ್ದಾರಂತೆ. ಚೈತ್ರಾ ಕುಂದಾಪುರ ಸೇರಿದಂತೆ ಆರೋಪಿಗಳ ಈ ಹೇಳಿಕೆಯನ್ನು ಸಿಸಿಬಿ ಪೊಲೀಸರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ.

ಚೈತ್ರಾ ಕುಂದಾಪುರ ಲೈಫ್​ನಲ್ಲಿ ಸೆಟಲ್ ಆಗೋ ಉದ್ದೇಶದಿಂದ ಈ ಕೃತ್ಯ ಎಸಗಿರುವುದಾಗಿ ಹೇಳಿಕೆ ನೀಡಿದ್ದಾರೆ. ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ಪೂಜಾರಿ ಇದಕ್ಕಾಗಿ ಕಥೆ, ಚಿತ್ರಕಥೆ ರೆಡಿ ಮಾಡಿದ್ದಾರೆ. ಪರಿಚಿತರ ಮೂಲಕ ಗೋವಿಂದ ಬಾಬುರನ್ನು ಮುನ್ನೆಲೆಗೆ ತರುವುದು. ಒಂದು ವೇಳೆ ಗೋವಿಂದ ಪೂಜಾರಿಗೆ ಟಿಕೆಟ್ ಸಿಕ್ರೆ ಸೇಫ್ ಅಂತ ಪ್ಲಾನ್ ಮಾಡಲಾಗಿತ್ತು. ಕೊನೆಗೆ ಬಿಜೆಪಿ ಪಕ್ಷದಿಂದ ಟಿಕೆಟ್ ಸಿಗದೆ ಇದ್ದಾಗ ಹಣ ಕೇಳಿದ್ರೆ ನಾಟಕವಾಡಲು ಚೈತ್ರಾ ಪ್ಲಾನ್ ಮಾಡಿದ್ರಂತೆ. ಎಲ್ಲಾ ಹಣವನ್ನು ವಿಶ್ವನಾಥ್ ಜೀಗೆ ಕೊಟ್ಟಿದ್ದಾಗಿ ಹೇಳಿಕೊಂಡಿದ್ದರು. ನಾವುಗಳು ನೆಪ ಮಾತ್ರಕ್ಕೆ ಸಹಾಯ ಮಾಡಿದ್ದೇವೆ ಅಂತ ನಾಟಕ ಮಾಡಿದ್ದಾರೆ.

ಇಲ್ಲಿದೆ ಕಂಪ್ಲೀಟ್ ವೀಡಿಯೋ………………

Dasara Fest : ಸರಳವಾಗಿ ಮೈಸೂರು ದಸರಾ ಮಾಡುತ್ತಂತೆ ಸರ್ಕಾರ..!

Cauvery Water : ಕಾವೇರಿ ಕಿಚ್ಚು..! ನಾಳೆ ಮಂಡ್ಯ ಜಿಲ್ಲೆ ಬಂದ್

Railway workshop: ಕ್ಷುಲ್ಲಕ ಕಾರಣಕ್ಕೆ ರೈಲ್ವೆ ವರ್ಕ್ ಶಾಪ್ ನಲ್ಲಿ ಸಿಬ್ಬಂದಿಗಳು ಹೊಡೆದಾಟ..!

- Advertisement -

Latest Posts

Don't Miss