National News : ಎನ್ಸಿಪಿ ಎರಡು ಬಣಗಳಾಗಿ ವಿಭಜನೆಯಾದ ಬಳಿಕ ಒಬ್ಬರ ಮೇಲೆ ಒಬ್ಬರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಶರದ್ ಪವಾರ್ ಬಣದ ಎನ್ಸಿಪಿ ಶಾಸಕರನ್ನು ಅನರ್ಹ ಮಾಡಲು ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ಗೆ ಅಜಿತ್ ಪವಾರ್ ಬಣ ಅರ್ಜಿ ಸಲ್ಲಿಸಿದೆ.
ಈ ಹಿಂದೆ ಶರದ್ ಪವಾರ್ ಬಣ, ಅಜಿತ್ ಪವಾರ್ ಬಣದ ಶಾಸಕರನ್ನು ಅನರ್ಹ ಮಾಡಬೇಕು ಎಂದು ಸ್ಪೀಕರ್ಗೆ ಮನವಿ ಸಲ್ಲಿಸಿದ್ದರು. ಇದೀಗ ಅಜಿತ್ ಪವಾರ್ ಬಣವು ಕೂಡ ಅದೇ ನಡೆ ಅನುಸರಿಸಿದೆ. ಎರಡು ದಿನದ ಹಿಂದಷ್ಟೇ ಎರಡೂ ಬಣಗಳು ಹಿರಿಯರ ನಾಯಕರು, ಪಕ್ಷದಲ್ಲಿ ಯಾವುದೇ ಒಡಕು ಇಲ್ಲ ಎಂದು ಹೇಳಿದ್ರು.
ಇದ್ರ ಮಧ್ಯೆ ಶರದ್ ಪವಾರ್ ಬಣ ನಮ್ಮನ್ನು ಕೇಳದೇ ಎನ್ಸಿಪಿ ರಾಷ್ಟ್ರೀಯ ಅಧ್ಯಕ್ಷರ ನೇಮಕ ಮಾಡಿದೆ ಎಂದು ಚುನಾವಣಾ ಆಯೋಗಕ್ಕೆ ಶರದ್ ಪವಾರ್ ಬಣದ ವಿರುದ್ಧ ಅಜಿತ್ ಪವಾರ್ ದೂರು ನೀಡಿದ್ದರು. ಈ ಬಗ್ಗೆ ಶರದ್ ಪವಾರ್ ಬಣದ ನಾಯಕರನ್ನು ಅಕ್ಟೋಬರ್ 6 ರಂದು ವೈಯಕ್ತಿಕ ವಿಚಾರಣೆ ಬರುವಂತೆ ಚುನಾವಣಾ ಆಯೋಗವು ತಿಳಿಸಿದೆ.
ಇಲ್ಲಿದೆ ಕಂಪ್ಲೀಟ್ ವೀಡಿಯೋ………………
Rahul gandhi: ಬೇಡಿಕೆ ಇಟ್ಟ ಒಂದೇ ತಿಂಗಳಲ್ಲಿ ಭೇಟಿಯಾದ ರಾಹುಲ್ ಗಾಂಧಿ..!




