National News: ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು(Chandrababu Naidu) ಅವರ ನ್ಯಾಯಾಂಗ ಬಂಧನದ ಅವಧಿಯನ್ನು 2 ದಿನಗಳವರೆಗೆ ವಿಸ್ತರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆಂಧ್ರಪ್ರದೇಶದ ಮಾಜಿ ಸಿಎಂ ಹಾಗೂ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರ ಬಂಧನ ಅವಧಿಯನ್ನು ವಿಜಯವಾಡದ ಎಸಿಬಿ ಕೋರ್ಟ್ ಎರಡು ದಿನಗಳ ಕಾಲ ವಿಸ್ತರಿಸಿದೆ.
ಮತ್ತೊಂದೆಡೆ ಆಂಧ್ರಪ್ರದೇಶದ ಅಸೆಂಬ್ಲಿ ಒಂದು ರೀತಿಯಲ್ಲಿ ಸಿನಿಮಾಯಂತಾಗಿದೆ. ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನ ವಿರೋಧಿಸಿ ಸದನದಲ್ಲಿ 14 ಟಿಡಿಪಿ ಜನ ಶಾಸಕರು ಕೋಲಾಹಲ ಸೃಷ್ಟಿಸಿದ್ದಾರೆ.
ಹಿಂದೂಪುರ ಶಾಸಕ, ನಟ ನಂದಮೂರಿ ಬಾಲಕೃಷ್ಣ ಸದನದಲ್ಲಿ ಮೀಸೆ ತಿರುವಿ ಹಂಗಾಮ ಸೃಷ್ಟಿಸಿದರೆ, ಉಳಿದವರು ಚಪ್ಪಾಳೆ ತಟ್ಟಿ ಸಾಥ್ ನೀಡಿದರು.
ಇದನ್ನ ಕಂಡ ವಿಧಾನಸಭೆ ಸ್ಪೀಕರ್ ಬಾಲಕೃಷ್ಣ ಮತ್ತು ಟಿಡಿಪಿ ಶಾಸಕರು ಸದನದ ಘನತೆ ಕಾಪಾಡಬೇಕು ಅಂತ ಆಗ್ರಹಿಸಿದರು. ಮತ್ತೆ ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಬಾಲಕೃಷ್ಣ ವಿಷಲ್ ಊದಿ ಹಂಗಾಮಾ ಮಾಡಿದ್ದಾರೆ.
ಇಲ್ಲಿದೆ ಕಂಪ್ಲೀಟ್ ವೀಡಿಯೋ……………………….
Rahul gandhi: ಬೇಡಿಕೆ ಇಟ್ಟ ಒಂದೇ ತಿಂಗಳಲ್ಲಿ ಭೇಟಿಯಾದ ರಾಹುಲ್ ಗಾಂಧಿ..!




