Tuesday, July 22, 2025

Latest Posts

Hubli news: ಗಣೇಶ ವಿಸರ್ಜನೆಗೆ ಸರ್ಕಾರ ವಿಧಿಸಿರುವ ನಿಯಮಗಳನ್ನು ಹಿಂಪಡೆಯುವಂತೆ ಆಗ್ರಹ..!

- Advertisement -

ಹುಬ್ಬಳ್ಳಿ: ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದು ಹಲವೆಡೆ ಗಣೇಶ ಮೂರ್ತಿ ವಿಸರ್ಜನೆ ನಡೆಸಿದ್ದಾರೆ. ಇನ್ನು ಹುಬ್ಬಳ್ಳಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆಯನ್ನು ಅದ್ದೂರಿಯಾಗಿ ಮೆರವಣಿಗೆ ಮಾಡುವ  ಯೋಜನೆಯನ್ನು ಹಾಕಿಕೋಳ್ಳಲಾಗಿತ್ತು ಆದರೆ ಅದಕ್ಕೆಲ್ಲ ಸರ್ಕಾರದ ಒಪ್ಪಿಗೆ ಸೂಚಿಸುತ್ತಿಲ್ಲ.

ಇಂದು ನಗರದಲ್ಲಿ ಶ್ರೀ ರಾಮ್ ಸೇನೆವತಿಯಿಂದ ಸುದ್ದಿಗೋಷ್ಟಿಯನ್ನು ಹಮ್ಮಿಕೊಂಡಿದ್ದು ಸಂಘದ ಕಾರ್ಯದರ್ಶಿಯಾದ ರಾಜೂ ಖಾನಪ್ಪ ಮಾತನಾಡಿದರು, ಗಣೇಶ ಮೂರ್ತಿ ವಿಸರ್ಜನೆ ವೇಳೆ ಸರ್ಕಾರ ಡಿಜೆ ಬಳಸದಂತೆ ಮತ್ತು ರಾತ್ರಿ 10 ಗಂಟೆ ಒಳಗೆ ಮೆರವಣಿಗೆ ಮುಗಿಸುವಂತೆ ಪೊಲೀಸರು ಆದೇಶ ಹೊರಡಿಸಿದ್ದಾರೆ.

ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿ ವಿರುದ್ಧ ಹೋರಾಟ ಮಾಡುತ್ತೇವೆ. ಬಿಜೆಪಿ ಮುಖಂಡರು ದ್ವಂದ್ವ ನಿಲುವು ಬಿಟ್ಟು ಹಿಂದೂ ಸಮಾಜದ ಜೊತೆಗೆ ನಿಲ್ಲಲಿ. ಸೆಪ್ಟೆಂಬರ್ 28ರಂದು ಗಣೇಶ ಮೂರ್ತಿಗಳ ಅದ್ಧೂರಿ ಮೆರವಣಿಗೆ ಮಾಡುತ್ತೇವೆ. ಸಾರ್ವಜನಿಕ ಗಜಾನನೋತ್ಸವ ಸಮಿತಿಗಳ ಜೊತೆಗೆ ಬೆನ್ನಿಗೆ ನಿಲ್ಲುತ್ತೇವೆ. ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರ ವಿಧಿಸಿರುವ ನಿರ್ಬಂಧಗಳನ್ನು ಕೂಡಲೆ ಹಿಂಪಡೆಯಬೇಕು.

ಹಿಂದೆ ಬಿಜೆಪಿ ಸರ್ಕಾರ ಸಮಯದಲ್ಲಿ ಸಾರ್ವಜನಿಕ ಗಣೇಶ ವಿಸರ್ಜನೆ ಸಮಯ ನಿಗದಿ ಮಾಡಲಾಗಿತ್ತು. ವಿಜೃಂಭಣೆಯಿಂದ ನಡೆಯುತ್ತಿದ್ದ ಗಣೇಶ ವಿಸರ್ಜನೆ ಸಮಯಕ್ಕೆ ತಡೆ ನೀಡಲಾಗಿತ್ತು. ಇವಾಗ ಕೇಂದ್ರ ಸಚಿವ ಪ್ರಲ್ಹಾದ್ದ ಜೋಶಿ ಅವರಿಗೆ ಸಮಯಕ್ಕೆ ತಡೆ ನೀಡಬಾರದು ಎಂದು ಹೇಳುತ್ತಿದ್ದಾರೆ. ಡಿಜೆ ಹಚ್ಚುವುದನ್ನ ಕೇಂದ್ರ ಸಚಿವರು ಈ ಹಿಂದೆ ಹತ್ತು ಗಂಟೆಗೆ ಮುಗಿಸಲು ಹೇಳಿದ್ದರು. ಇವಾಗ ಕಾಂಗ್ರೆಸ್ ಸರ್ಕಾರ ಬಂದ ನಂತರ ಡಿಜೆ ಹಚ್ಚುತ್ತೇವೆ ಸಮಯ ನಿಗದಿ ಮಾಡಬಾರದು ಎಂದು ಹೇಳುತ್ತಿದ್ದಾರೆ. ಇವಾಗ ಜೋಶಿ ಅವರು ಹಿಂದೂ ಯುವಕರನ್ನ ಆಕರ್ಷಣೆ ಮಾಡಲು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಕಿಡಿ ಕಾರಿದರು.

Lawyer: ರಾಜ್ಯದ ನದಿಗಳ ಪರ ವಾದ ಮಂಡಿಸಲು ವಕೀಲರಿಗೆ ಕೋಟಿಗಟ್ಟಲೆ ಶುಲ್ಕ..!

ತುಮಕೂರಿನ ಚಿಕ್ಕನಾಯಕನಹಳ್ಳಿ ಜೆ.ಡಿ.ಎಸ್ ಶಾಸಕ ಸುರೇಶ್ ಬಾಬು ಪ್ರತಿಕ್ರಿಯೆ.

ಉಪ್ಪಾರ ಸಮುದಾಯದವರಿಂದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ..!

- Advertisement -

Latest Posts

Don't Miss