Saturday, July 5, 2025

Latest Posts

ಮೈಷುಗರ್ ಉಳಿಸಿ, ಮಂಡ್ಯ ಉಳಿಸಿ

- Advertisement -

ಕರ್ನಾಟಕ ಟಿವಿ : ಬೆಂಗಳೂರಿನಲ್ಲಿ ಇಂದು ಮಂಡ್ಯ ಜಿಲ್ಲೆಯ ನಾಯಕರ ಜೊತೆ ಸಕ್ಕರೆ ಕಾರ್ಖಾನೆಗಳ ಉಳಿವಿಗೆ ಸಭೆ ನಡೀತು.. ವಿಧಾನಸೌಧದಲ್ಲಿ ನಡೆದ ಸಭೆಗೆ ತೆರಳುವ ಮುನ್ನ ಮಂಡ್ಯದಲ್ಲಿ  ಡಾ. ರವೀಂದ್ರ ಹಾಗೂ ರೈತಮುಖಂಡರು ಒಂದೆಡೆ ಸೇರಿ ಚರ್ಚೆ ಮಾಡಿದ್ರು.. ಈ ವೇಳೆ ಮೈಷುಗರ್ ಉಳಿಸಿ, ಮಂಡ್ಯ ಉಳಿಸಿ ಘೋಷಣೆ ಕೂಗಿ ಬೆಂಗಳೂರಿನ ಕಡೆ ಹೆಜ್ಜೆ ಹಾಕಿದ್ರು.. ಬಹುತೇಕ ಮಂಡ್ಯ ಸಕ್ಕರೆ ಕಾರ್ಖಾನೆಗಳ ಪುನರಾರಂಭ ಕುರಿತು ಸರ್ಕಾರ ಇಂದು ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.

ಸಭೆಗೆ ತೆರಳುವ ಮುನ್ನ ಮಾತನಾಡಿದ ಮುಖಂಡ ಡಾ ರವೀಂದ್ರ ಮೈಷುಗರ್ ಪುನರಾರಂಭ ಮಾಡಿಸುವುದೇ ನಮ್ಮ ಉದ್ದೇಶ ಈ ಮೂಲಕ ಮಂಡ್ಯ ಜಿಲ್ಲೆಯ ರೈತರನ್ನ ಉಳಿಸುವುದೇ ನಮ್ಮಗುರಿ ಅಂತ ಡಾ ರವೀಂದ್ರ ಹೇಳಿದ್ರು.

ಪ್ರವೀಣ್ ಕುಮಾರ್ ಜಿಟಿ, ಕರ್ನಾಟಕ ಟಿವಿ, ಮಂಡ್ಯ

- Advertisement -

Latest Posts

Don't Miss