ಧಾರವಾಡ: ಒಂದು ಕಡೆ ಬರಗಾಲ, ಮತ್ತೊಂದೆಡೆ ಸಾಕು ಪ್ರಾಣಿಗಳಿಗೆ ತಿನ್ನಲು ಮೇವಿಲ್ಲ ಇದರಿಂದ ರೋಸಿಹೋದ ರೈತ ಸಂತೆಯಲ್ಲಿ ಹಸುಗಳನ್ನು ಮಾರಲು ಹೊರಟರೆ ಕೊಳ್ಳವವರಿಲ್ಲ ಎಂದು ರೈತ ತಲೆಮೇಲೆ ಕೈ ಇಟ್ಟು ಕುಳಿತಿದ್ದಾನೆ.
ಸಕಾಲಕ್ಕೆ ಮಳೆಯಾಗದ ಕಾರಣ ಭೂಮಿ ಬರಡಾಗಿ ಹಸಿರು ಮರೆಯಾಗಿ ಸಾಕು ಪ್ರಾಣಿಗಳಿಗೆ ತಿನ್ನಲು ಮೇವು ಇಲ್ಲವಾಗಿದೆ. ಧಾರವಾಡದ ಮಾಳಾಪುರ ಬಡಾವಣೆಯಲ್ಲಿ ಪ್ರತಿ ಮಂಗಳವಾರ ನಡೆಯುವ ಜಾನುವಾರು ಮಾರುಕಟ್ಟೆಯಲ್ಲಿ ಮಾರಲು ಹಸುಗಳ ಸಮೇತ ಬಂದಿದ್ದರು ಆದರೆ ಕೊಳ್ಳವವರೇ ಇಲ್ಲವಾಗಿದೆ. ಕೊಳ್ಳುವವರು ಸಹ ಒಂದು ಕ್ಷಣ ಹಸುಗಳಿಗೆ ಆಹಾರ ಮತ್ತು ನೀರಿನ ಬಗ್ಗೆ ಯೋಚಿಸಿ ಕೊಳ್ಳಲು ಹೆದರುತ್ತಿದ್ದಾರೆ
ಮಳೆ ಕೊರತೆಯಿಂದಾಗಿ ನೀರಿನ ಅಭಾವ ಹೆಚ್ಚಾಗಿದ್ದು ಹಾಲು ಕೊಡುವ ರಾಸುಗಳಿಗೆ ಮೇವು, ಬೂಸಾ ಹಿಂಡಿ ಸೇರಿ 300 ಖರ್ಚಾಗುತ್ತಿದ್ದು 6 ರಿಂದ 8 ಲೀಟರ್ ಹಾಲು ಡೇರಿಗೆ ಮಾರಿದರೆ 250 ರೂ ದೊರೆಯುತ್ತಿದೆ. ಹಾಗಾಗಿ ನಷ್ಟ ಅನುಭವಿಸುತ್ತಿರುವ ರೈತ ಮಾರಾಟಕ್ಕೆ ಮುಂದಾಗಿದ್ದಾನೆ. ಆದರೆ ಕೊಳ್ಳಲು ಇದನ್ನೆ ಬಂಡವಾಳ ಮಾಡಿಕೊಂಡ ಅರ್ದಕ್ಕಿಂತ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
Karnataka Lokayukta: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಪುರಸಭೆ ಅಧಿಕಾರಿ..!