ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸುವ್ಯವಸ್ಥಿತ ರೀತಿಯಲ್ಲಿ ನಡೆಯಬೇಕಿದ್ದ ಪಾಲಿಕೆಯ ಸಾಮಾನ್ಯ ಸಭೆ ಗೊಂದಲದ ಗೂಡಾಗಿದೆ. ಮೇಯರ್ ಕಚೇರಿ ಮುಂದೆ ಕಾಂಗ್ರೆಸ್ ಪಾಲಿಕೆ ಸದಸ್ಯರ ಪ್ರತಿಭಟನೆ ಒಂದು ಕಡೆಯಾದರೇ ಮತ್ತೊಂದು ಕಡೆ ಪಾಲಿಕೆ ಸಭೆಯಲ್ಲಿ ಕಿತ್ತಾಟ ನಡೆಸಿದರು.
ಹೌದು.. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ನಡೆಯುತ್ತಿದ್ದ ಸಾಮಾನ್ಯ ಸಭೆಯಲ್ಲಿ ಸಭೆ ನಡೆಸದೆ ಸಭೆಯನ್ನು ಮುಂದೂಡಿದ ಮೇಯರ್ ವೀಣಾ ಭರದ್ವಾಡ ವಿರುದ್ಧ ವಿರೋಧ ಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದು, ರೊಚ್ಚಿಗೆದ್ದು ಮೇಯರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಸದಸ್ಯರು ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.
ಇನ್ನೂ ಸಭೆ ಪ್ರಾರಂಭ ಆಗುತ್ತಿದಂತೆ ವಿಪಕ್ಷಗಳ ನಡುವೆ ವಾಗ್ವಾದ ಆರಂಭ ಆಗಿತ್ತು. ವಿಷಯಪಟ್ಟಿ ವಿಚಾರದಲ್ಲಿ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ವಾದ ನಡೆದಿತ್ತು. ವಾಗ್ವಾದ ನಡೆಯುತ್ತಲೇ ಸಭೆಯನ್ನು ಮೇಯರ್ ಮುಂದೂಡಿದ್ದು, ಕಾಲ ಹರಣ ಮಾಡುತ್ತಿದ್ದಾರೆಂದು ಪ್ರತಿಭಟನೆ ಆರಂಭಿಸಿದ ವಿರೋಧ ಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಗುತ್ತಿಗೆ ಪದ್ದತಿ ರದ್ದು ಪಡಿಸಿ ನೇರ ವೇತನಕ್ಕೆ ಅಗ್ರಹಿಸಿ ಪ್ರತಿಭಟನೆ..!
Jaggesh: ನಟ ಜಗ್ಗೇಶ್ ಗೆ ಬೆಡ್ ರೆಸ್ಟ್ ಮಾಡಿ ಎಂದು ಸಲಹೆ ನೀಡಿದ ವೈದ್ಯರು.!ಯಾಕೆ ಏನಾಯ್ತು.!