Film News : ಬಿಗ್ ಬಾಸ್ ಮತ್ತೆ ಮನರಂಜನೆಗೆ ಸಜ್ಜಾಗಿದೆ. ಇದೀಗ ಎಲ್ಲರನ್ನು ಕಾಡೋ ಪ್ರಶ್ನೆ ಅಂದ್ರೆ ಯಾರೆಲ್ಲ ಬಿಗ್ ಬಾಸ್ ಮನೆಯಂಗಳಕ್ಕೆ ಬರ್ತಾರೆ ಅನ್ನೋದು. ಇನ್ನು ಅಭಿಮಾನಿಗಳ ಆಸೆ ಅಂದ್ರೆ ಡಾಕ್ಟರ್ ಬ್ರೋ ಬಿಗ್ ಬಾಸ್ ಗೆ ಬರ್ಬೇಕು ಅನ್ನೋದು. ಈ ಬಗ್ಗೆ ಒಂದು ಮಹತ್ತರವಾದ ಅಪ್ ಡೇಟ್ ಸಿಕ್ಕಿದೆ. ಹಾಗಿದ್ರೆ ಡಾ.ಬ್ರೋ ಬರ್ತಾರಾ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್………..
ಪ್ರತಿ ಬಾರಿ ಬಿಗ್ ಬಾಸ್ ಆರಂಭ ಆಗುವುದಕ್ಕೂ ಮೊದಲು ಒಂದಷ್ಟು ಹೆಸರುಗಳು ಓಡಾಡುತ್ತವೆ. ಪ್ರತಿ ಸೀಸನ್ನಲ್ಲೂ ಇದು ಸರ್ವೇ ಸಾಮಾನ್ಯ. 10ನೇ ಸೀಸನ್ ಕೂಡ ಇದಕ್ಕೆ ಹೊರತಾಗಿಲ್ಲ. ಕಳೆದ ವರ್ಷದಂತೆ ಈ ವರ್ಷವೂ ಕಲಾವಿದರು, ಸೋಶಿಯಲ್ ಮೀಡಿಯಾ ಮೂಲಕ ಫೇಮಸ್ ಆದವರು, ಯೂಟ್ಯೂಬರ್ಸ್, ಆ್ಯಂಕರ್ಗಳು ಕೂಡ ಇರಲಿದ್ದಾರೆ ಎನ್ನಲಾಗುತ್ತಿದೆ.
ಬಿಗ್ ಬಾಸ್ ಸೀಸನ್ 10’ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ವೀಕೆಂಡ್ನಲ್ಲಿ ಬಿಗ್ ಬಾಸ್ ಆರಂಭ ಆಗಲಿದೆ. ಹೊಸ ಸೀಸನ್ ಬಗ್ಗೆ ವೀಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ದಶಕದ ಸಂಭ್ರಮ ಆಗಿರುವುದುರಿಂದ ಈ ಬಾರಿಯ ಬಿಗ್ ಬಾಸ್ ಸಖತ್ ಅದ್ದೂರಿಯಾಗಿ ಇರಲಿದೆ ಎನ್ನಲಾಗುತ್ತಿದೆ. ಇದರ ಜೊತೆಗೆ ದೊಡ್ಮನೆ ಒಳಗೆ ಹೋಗುವ ಸ್ಪರ್ಧಿಗಳು ಯಾರ್ಯಾರು ಎನ್ನುವ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪಟ್ಟಿ ಹರಿದಾಡುತ್ತಿದೆ. ಆ ಕುರಿತು ಇಲ್ಲಿದೆ ಮಾಹಿತಿ.
ಪ್ರತಿ ಬಾರಿ ಬಿಗ್ ಬಾಸ್ ಆರಂಭ ಆಗುವುದಕ್ಕೂ ಮೊದಲು ಒಂದಷ್ಟು ಹೆಸರುಗಳು ಓಡಾಡುತ್ತವೆ. ಪ್ರತಿ ಸೀಸನ್ನಲ್ಲೂ ಇದು ಸರ್ವೇ ಸಾಮಾನ್ಯ. 10ನೇ ಸೀಸನ್ ಕೂಡ ಇದಕ್ಕೆ ಹೊರತಾಗಿಲ್ಲ. ಕಳೆದ ವರ್ಷದಂತೆ ಈ ವರ್ಷವೂ ಕಲಾವಿದರು, ಸೋಶಿಯಲ್ ಮೀಡಿಯಾ ಮೂಲಕ ಫೇಮಸ್ ಆದವರು, ಯೂಟ್ಯೂಬರ್ಸ್, ಆ್ಯಂಕರ್ಗಳು ಕೂಡ ಇರಲಿದ್ದಾರೆ ಎನ್ನಲಾಗುತ್ತಿದೆ.
‘ಕನ್ನಡತಿ’ ಧಾರಾವಾಹಿ ಮೂಲಕ ಫೇಮಸ್ ಆದ ರಂಜನಿ ರಾಘವನ್ ದೊಡ್ಮನೆಗೆ ಹೋಗುತ್ತಾರೆ ಎಂದು ಸುದ್ದಿ ಆಗಿದೆ. ಕಲರ್ಸ್ ಜೊತೆ ಅವರಿಗೆ ಒಳ್ಳೆಯ ಒಡನಾಟ ಇದೆ. ಆರ್ಸಿಬಿ ಪರ ಆಡಿದ್ದ ವಿನಯ್ ಕುಮಾರ್ ಕೂಡ ದೊಡ್ಮನೆಗೆ ಹೋಗಲಿದ್ದಾರಂತೆ.
ಕೆಜಿಎಫ್ ಚಿತ್ರದಲ್ಲಿ ನಟಿಸಿದ್ದ ರೂಪಾ ರಾಯಪ್ಪ, ಕಿರುತೆರೆ ನಟ ರಾಜೇಶ್ ಧ್ರುವ, ಮಿಮಿಕ್ರಿ ಗೋಪಿ, ಬುಲೆಟ್ ಪ್ರಕಾಶ್ ಮಗ ರಕ್ಷಕ್ ಕೂಡ ದೊಡ್ಮನೆಯಲ್ಲಿ ಇರಲಿದ್ದಾರೆ. ಅದ್ವಿತಿ ಶೆಟ್ಟಿ ಕೂಡ ಬಿಗ್ ಬಾಸ್ಗೆ ತೆರಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅವರು ಹೋಗುತ್ತಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಡಾಕ್ಟರ್ ಬ್ರೋ ಕೂಡ ದೊಡ್ಮನೆಗೆ ತೆರಳುತ್ತಾರೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಬಿಗ್ ಬಾಸ್ ಗೆ ಡಾಕ್ಟರ್ ಬ್ರೋ ಬಂದ್ರೆ ಈ ಬಾರಿಯ ಬಿಗ್ ಬಾಸ್ ಬೇರೆ ಲೆವೆಲ್ ಗೆ ಹೋಗೋದಂತೂ ಗ್ಯಾರಂಟಿ ಎನ್ನುತ್ತಾರೆ ಅಭಿಮಾನಿ ಬಳಗ…
Puneeth Rajkumar : ರಾತ್ರಿ ಬೆಳಗಾಗೋದ್ರೊಳಗೆ ಅಪ್ಪು ಪ್ರತಿಮೆ ಅನಾವರಣ…!
Jaggesh: ನಟ ಜಗ್ಗೇಶ್ ಗೆ ಬೆಡ್ ರೆಸ್ಟ್ ಮಾಡಿ ಎಂದು ಸಲಹೆ ನೀಡಿದ ವೈದ್ಯರು.!ಯಾಕೆ ಏನಾಯ್ತು.!
Cauvery Water : ಕಾವೇರಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಫ್ಲೈಟ್ ಹತ್ತಿದ ಡಿ ಬಾಸ್…!

