Born Baby : ಧಾರವಾಡ: ನವಜಾತ ಶಿಶು ಗದ್ದೆಯಲ್ಲಿ ಪತ್ತೆ…!

Dharwad News : ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಹೊರ ವಲಯದ ಕೆಇಬಿ ಗ್ರೀಡ್ ಬಳಿಯ ಕಬ್ಬಿನ ಗದ್ದೆಯೊಂದರಲ್ಲಿ ನವಜಾತ ಶಿಶು ಪತ್ತೆಯಾಗಿದೆ. ಕಬ್ಬಿನ ಗದ್ದೆಯಲ್ಲಿಯೇ ಮಗುವಿಗೆ ಜನ್ಮ ನೀಡಿ ತಾಯಿ ಪರಾರಿಯಾಗಿದ್ದಾಳೆ ಎಂದು ಶಂಕಿಸಲಾಗಿದೆ. ಪಕ್ಕದ ಮನೆಯವರು ಈ ಶಿಶುವನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ.

ಶಿಶುವಿಗೆ ಇರುವೆಗಳು ಕಚ್ಚಲು ಆರಂಭಿಸಿದಾಗ ಮಗು ಅಳಲು ಆರಂಭಿಸಿದಾಗ ಇದನ್ನು ಕೇಳಿಸಿಕೊಂಡ ಪಕ್ಕದ ಮನೆಯವರು ಶಿಶುವನ್ನು ರಕ್ಷಿಸಿ ದ್ದಾರೆ. ಅಂದಾಜು ಮೂರು ಕೆ.ಜಿ ತೂಕದ ಗಂಡು ಮಗು ಎಂದು ಹೇಳಲಾಗುತ್ತಿದೆ.

ಮಗುವನ್ನು ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿದ ಬಳಿಕ ಶಿಶು ಪಾಲನಾ ಕೇಂದ್ರಕ್ಕೆ ಶಿಶುವನ್ನು ರವಾನಿಸಲಾಗಿದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Police station;ಈ ಹಿಂದೆ ಪೊಲೀಸ್ ವಾಹನಗಳಿಗೆ ಕಲ್ಲು ಹೊಡೆದಿದ್ರು ಈಗ ಬೆಂಕಿ ಹಚ್ಚುತ್ತಾರೆ ;ಟೆಂಗಿನಕಾಯಿ..!

ಹಳೇ ಹುಬ್ಬಳ್ಳಿ ಗಲಾಟೆ ಪ್ರಕರಣ ಕೈ ಬಿಡುವಂತೆ ಪ್ರಭಾವಿ ಸಚಿವರ ಪತ್ರ..!

ಸಂಸದರ ಮೇಲೆ ದೌರ್ಜನ್ಯ ಖಂಡಿಸಿ ಪ್ರತಿಭಟನೆ; ಸಂಸದ ಮುನಿಸ್ವಾಮಿ ಅಧ್ಯಕ್ಷತೆ

About The Author