Monday, December 23, 2024

Latest Posts

ಈ 5 ರಾಜ್ಯಗಳಲ್ಲಿ ಕೊರೊನಾಗೆ ಹೆಚ್ಚು ಜನ ಸಾವನ್ನಪ್ಪಿದ್ದಾರೆ

- Advertisement -

ಕರ್ನಾಟಕ ಟಿವಿ :  ಇನ್ನು ದೇಶಾದ್ಯಂತ ಕೊರೊನಾಗೆ 1900 ಜನ ಬಲಿಯಾಗಿದ್ದಾರೆ.. ಇದರಲ್ಲಿ ಅತಿಹೆಚ್ಚು ಸಾವು ಸಂಭವಿಸಿ ಇರುವ 5 ರಾಜ್ಯಗಳ ಪಟ್ಟಿ ನೋಡೋದಾದ್ರೆ ಸೋಂಕಿತರಲ್ಲೂ ನಂಬರ್ ಒನ್ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ  731 ಸೋಂಕಿತರು ಸಾವಿಗೀಡಾಗಿದ್ದಾರೆ.  ಇನ್ನು ಎರಡನೇ ಅತಿಹೆಚ್ಚು ಸೋಂಕಿತರಿರುವ ಗುಜರಾತ್ ನಲ್ಲಿ 449 ಸೋಂಕಿತರು ಸಾವನ್ನಪ್ಪಿದ್ದಾರೆ.  ಸೋಂಕಿತರ ಸಂಖ್ಯೆಯಲ್ಲಿ 6ನೇ ಸ್ಥಾನದಲ್ಲಿದ್ರೂ ಮಧ್ಯಪ್ರದೇಶ ಸಾವಿನ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದ್ದು ಇದುವರೆಗೂ  200 ಸೋಂಕಿತರು ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶದಲ್ಲಿ  ನೂರಕ್ಕೆ 6 ಸೊಂಕಿತರು ಸಾವನ್ನಪ್ಪುತ್ತಿದ್ದಾರೆ. ಇನ್ನು  ಸೋಂಕಿತರ ಸಂಖ್ಯೆಯಲ್ಲಿ 9ನೇ ಸ್ಥಾನದಲ್ಲಿದ್ರು ಪಶ್ಚಿಮ ಬಂಗಾಳ ಸಾವಿನ ಸಂಖ್ಯೆಯಲ್ಲಿ 4ನೇ ಸ್ಥಾನದಲ್ಲಿದ್ದು ಇದುವರೆಗೂ 160 ಸೋಂಕಿತರು ಸಾವನ್ನಪ್ಪಿದ್ದಾರೆ. ಇನ್ನು ಅಂತಿಮ ವಾಗಿ ರಾಜಸ್ಥಾನ ಸಾವಿನಸಂಖ್ಯೆಯಲ್ಲಿ 5ನೇ ಸ್ಥಾನದಲ್ಲಿದ್ದು 103 ಸೊಂಕಿತರು ಸಾವನ್ನಪ್ಪಿದ್ದಾರೆ.

- Advertisement -

Latest Posts

Don't Miss