ಹಾಸನ: ನಗರದಲ್ಲಿ ಕರವೇ ಕಾರ್ಯಕರ್ತರು ಸಚಿವರಿಗೆ ಮುತ್ತಿಗೆ ಹಾಕಿದ ವೇಳೆ ಪೊಲೀಸರು ಅವರನ್ನು ಬಂಧಿಸಿದರು ಪರಿಸ್ಥಿತಿ ತಿಳಿಯಾದ ಮೇಲೆ ಮಾಧ್ಯಮದ ಮುಂದೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್ ರಾಜಣ್ಣ ಅವರು ಮಾಧ್ಯಮದವರ ಮುಂದೆ ಜಿಲ್ಲೆಗೆ ಭೇಟಿ ನೀಡದ ಇರುವುದಕ್ಕೆ ಕಾರಣ ತಿಳಿಸಿದರು.
ಅನಾರೋಗ್ಯದ ಕಾರಣ ಜಿಲ್ಲೆಗೆ ಭೇಟಿ ನೀಡಲು ಆಸಾಧ್ಯವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನೀವೇಲ್ಲ ನೋಡಿರುತ್ತೀರಿ. ನಾನು ಸ್ವತಃ ನನ್ನ ಬಾಯಲ್ಲಿ ಹೇಳಿದರೆ ಸತ್ಯ ಮಾಧ್ಯಮಗಳಲ್ಲಿ ಬಂದರೆ ಸುಳ್ಳಾ ಎಂದು ಪ್ರಶ್ನೆ ಮಾಡಿದರು.
ಈಗಾಗಲೆ ಸಾಕಷ್ಟು ಜನ ಸಚಿವರು ಶಾಸಕರು ಭೇಟಿ ನೀಡಿ ನನ್ನ ಆರೋಗ್ಯವನ್ನು ವಿಚಾರಿಸಿದ್ದಾರೆ.ಅದನ್ನೂ ನೀವೂ ನೋಡಿದ್ದೀರಿ ನಾನೇನು ಉದ್ದೇಶ ಪೂರ್ವಕವಾಗಿ ಬಂದಿಲ್ಲ ಎಂದು ಯಾರು ಸಹ ಅನ್ಯತಾ ಭಾವಿಸಬಾರದು ಎಂದು ಮನವಿ ಮಾಡಿದರು.ಈಗಲು ನಾನು ಸಂಪೂರ್ಣ ಗುಣಮುಖ ಆಗಿಲ್ಲ. ಆದರು ಹೋಗಬೇಕು ಎನ್ನುವ ಕಾರಣಕ್ಕಾಗಿ ಬಂದಿದ್ದೇನೆ ಇನ್ಮುಂದೆ ನಿರಂತರವಾಗಿ ಬರುತ್ತೇನೆ ಎಂದ ಸಚಿವರು ಭರವಸೆ ನೀಡಿದರು.
ಬರಗಾಲದ ಬಗ್ಗೆ ನಅನು ಮತ್ತು ಕಂದಾಯ ಸಚಿವರಿ ಸರ್ಕಾರಕ್ಕೆ ಮನವರಿಕೆ ಮಾಡಿದ್ದೇವೆ. ಹಾಸನ ಜಿಲ್ಲೆಗೆ ಬರಘೋಷಣೆ ಕುರಿತು ಚರ್ಚೆ ಆಗಿದ್ದು ಬೆಳೆ ಸಮೀಕ್ಷೆ ಬಳಿಕ ಹಾಸನ ಜಿಲ್ಲೆಯ ಅರಕಲಗೂಡು, ಆಲೂರು ಅರಸೀಕೆರೆ, ಹಾಸನ ತಾಲೂಕುಗಳನ್ನು ಬರ ಎಂದು ಘೋಷಣೆ ಬಗ್ಗೆ ತೀರ್ಮಾನ ಆಗಿದೆ. ವರದಿ ಬಂದ ಬಳಿಕ ಅವುಗಳನ್ನು ಕೂಡ ಬರ ಎಂದು ಘೋಷಣೆ ಮಾಡುತ್ತೇವೆ ಎಂದು ಹೇಳಿದರು.
ಬರ ಸಾಧಾರಣ, ಬರ ಎನ್ನೋದು ನಮ್ಮ ಕಾನ್ಸೆಪ್ಟ್ ಅಲ್ಲ.ಅದು ಕೇಂದ್ರ ಸರ್ಕಾರದ ಗೈಡ್ ಲೈನ್ ಇದೆ. ಅದನ್ನು ಮೀರಿ ನಾವು ಒಂದಕ್ಷರ ಕೂಡ ಬದಲು ಮಾಡಲು ಅಗೋದಿಲ್ಲ ಒಂದು ವೇಳೆ ಮಾಡಿದರೆ ನಮಗೆ ಕೇಂದ್ರದಿಂದ ಪರಿಹಾರ ಸಿಗುವುದಿಲ್ಲ.ನಮ್ಮ ರಾಜ್ಯದಲ್ಲಿ 36 ಸಾವಿರ ಕೋಟಿ ಬೆಳೆ ನಷ್ಟ ಆಗಿದೆ ಎನ್ನೋದು ನಮ್ಮ ವರದಿ. ಕೇಂದ್ರದ ಮಾನದಂಡದ ಪ್ರಕಾರ 4800 ಕೋಟಿ ಪರಿಹಾರಕ್ಕೆ ನಾವು ಅರ್ಹರು ಎಂದು ಕ್ಲೇಮ್ ಮಾಡಿದ್ದೇವೆ, ಈಗ ಬಂದಿದ್ದ ಟೀಂ ವರದಿ ಆದರಿಸಿ ನಮಗೆ ಎಷ್ಟು ಪರಿಹಾರ ಸಿಗಬಹುದು ಗೊತ್ತಾಗಲಿದೆ. ಕೇಂದ್ರದಲ್ಲಿ ಬರ ಘೋಷಣೆಗೆ ಶೇಕಡ 63 ಮಳೆ ಕೊರತೆ ಇರಬೇಕು. ಮೂರು ವಾರ ಶುಷ್ಕ ವಾತಾವರಣ ಇರಬೇಕು ಎಂದಿದೆ
ಹಾಸನ ಜಿಲ್ಲೆಯ ಹೊಳೆನರಸೀಪುರ, ಚನ್ನರಾಯಪಟ್ಟಣ, ಸಕಲೇಶಪುರ ಕೂಡ ಬರ ಪಟ್ಟಿಗೆ ಸೇರಿಸುವ ವಿಶ್ವಾಸ ಇದೆ ಎಂದ ಸಚಿವರು ಹೇಳಿದರು. ಬರ ಘೋಷಣೆ ನಿಯಮ ಬದಲಾವಣೆಗಾಗಿ ಸಿಎಂ ಅವರೆ ಪತ್ರ ಬರೆದಿದ್ದಾರೆ. ಆದರೆ ಅವರು ಇದುವರೆಗೆ ಆ ಬಗ್ಗೆ ಚಕಾರ ಎತ್ತಿಲ್ಲ. ಹಾಗಾಗಿ ಇರುವ ಗೈಡ್ ಲೈನ್‌ನಲ್ಲೆ ಎಷ್ಟು ಪರಿಹಾರ ಪಡೆಯಬಹುದು ಎನ್ನುವ ಬಗ್ಗೆ ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಬರ ಘೋಷಣೆ ನಿಯಮ ನಮಗೆ ಸಮಾಯದಾನ ಇಲ್ಲ. ಸಮಾಧಾನ ಇದ್ದರೆ ನಾವು ಯಾಕೆ ಸಿಎಂ ಮೂಲಕ ಪತ್ರ ಬರೆಯಬೇಕಿತ್ತು. ಈಗಿರುವ ನಿಯಮಗಳ ಪ್ರಕಾರ ರೈತರಿಗೆ ಅನುಕೂಲ ಆಗಲ್ಲ ಹಾಗಾಗಿ ಬದಲಾವಣೆ ಮಾಡಿ ಎಂದು ಪತ್ರ ಬರೆಯಲಾಗಿದೆ ಎಂದ ಸಚಿವರು ಮಾಧ್ಯಮದವರ ಮುಂದೆ ತಿಳಿಸಿದರು.
ಕರವೇ ಕಾರ್ಯಕರ್ತರಿಂದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಕಾರಿಗೆ ಮುತ್ತಿಗೆ ಯತ್ನ..!
friend ship: ಪ್ರೇಮಿಗಳಿಗೆ ಸಹಾಯಮಾಡಿದ ಸ್ನೇಹಿತ ; ಆದರೆ ನಂತರ ನಡೆದಿದ್ದೇ ಬೇರೆ..!
2A Reservation: ಮೀಸಲಾತಿಗಾಗಿ ಇಷ್ಟಲಿಂಗ ಪೂಜೆ ಮಾಡಿ ಪ್ರತಿಭಟನೆ ಕೈಗೊಳ್ಳುತ್ತೇವೆ. ಜಯಮೃತ್ಯುಂಜಯ ಸ್ವಾಮಿಜಿ..!