Thursday, October 30, 2025

Latest Posts

Call Record : ಅನುಮತಿ ಇಲ್ಲದೆ ಕಾಲ್ ರೆಕಾರ್ಡ್ ಮಾಡುವುದು ಕಾನೂನು ಉಲ್ಲಂಘನೆ

- Advertisement -

Bilasapur News : ಸಂಬಂಧಿತ ವ್ಯಕ್ತಿಯ ಅನುಮತಿಯಿಲ್ಲದೆ ದೂರವಾಣಿ ಸಂಭಾಷಣೆ ರೆಕಾರ್ಡ್ ಮಾಡá-ವುದು ಸಂವಿಧಾನದ ಪರಿಚ್ಛೇದ 21ರ ಅಡಿಯಲ್ಲಿ ಖಾಸಗಿತನದ ಹಕ್ಕಿನ ಉಲ್ಲಂಘನೆ ಎಂದು ಛತ್ತೀಸ್ಗಢ ಹೈಕೋರ್ಟ್ ತೀರ್ಪು ನೀಡಿದೆ.

ಪ್ರಕರಣದ ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ರಾಕೇಶ್ ಮೋಹನ್ ಪಾಂಡೆ ಅವರಿದ್ದ ಪೀಠವು 2021ರ ಅಕ್ಟೋಬರ್ 21ರಂದು ಮಹಾಸಮುಂಡ್ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ರದ್ದುಗೊಳಿಸುವ ಸಂದರ್ಭದಲ್ಲಿ ಈ ಆದೇಶ ನೀಡಿದೆ.

ವಿವರ: ಛತ್ತೀಸ್ಗಢ ಹೈಕೋರ್ಟ್ ಜೀವನಾಂಶಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸುತ್ತಿತ್ತು. ಕೌಟುಂಬಿಕ ನ್ಯಾಯಾಲಯವು ಪತಿ- ಪತ್ನಿ ಜತೆಗಿನ ಸಂಭಾಷಣೆಯ ರೆಕಾರ್ಡ್ ಅನ್ನು ಸಾಕ್ಷ್ಯವಾಗಿ ಹಾಜರುಪಡಿಸಲು ಅನುಮತಿ ನೀಡಿತ್ತು. ಪತ್ನಿ ತನ್ನ ಪತಿಯಿಂದ ಜೀವನಾಂಶ ಭತ್ಯೆಗಾಗಿ 2019ರಲ್ಲಿ ಮಹಾಸಮುಂಡ್ನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಪುರಾವೆಯನ್ನು ನ್ಯಾಯಾಲಯದಲ್ಲಿ ಸಲ್ಲಿಸಿದ್ದರು. ಪತ್ನಿ ಮೇಲಿನ ಅನುಮಾನದಿಂದ ಪತಿ ಜೀವನಾಂಶ ನೀಡಲು ನಿರಾಕರಿಸಿದ್ದರು. ಅರ್ಜಿದಾರರ ಸಂಭಾಷಣೆಯನ್ನು ತಮ್ಮ ಮೊಬೈಲ್ಫೋನ್ನಲ್ಲಿ ರೆಕಾರ್ಡ್ ಮಾಡಲಾಗಿದೆ. ರೇಕಾರ್ಡ್ ಆಧಾರದ ಮೇಲೆ ಪತ್ನಿಯನ್ನು ನ್ಯಾಯಾಲಯದ ಮುಂದೆ ಕ್ರಾಸ್ ಎಕ್ಸಾಮಿನ್ ಮಾಡಬೇಕು ಎಂದು ಪತಿ ಅರ್ಜಿ ಸಲ್ಲಿಸಿದ್ದರು. ಪತಿ ಸಲ್ಲಿಸಿದ್ದ ಅರ್ಜಿ ಸ್ವೀಕರಿಸಿದ ಕೌಟುಂಬಿಕ ನ್ಯಾಯಾಲಯ ಅನುಮತಿ ನೀಡಿತ್ತು.

ಹೈಕೋರ್ಟ್ ಮೊರೆ ಹೋದ ಮಹಿಳೆ: ಕೌಟುಂಬಿಕ ನ್ಯಾಯಾಲಯದ ಆದೇಶದ ನಂತರ ಮಹಿಳೆಯು 2021ರ ಅಕ್ಟೋಬರ್ 21ರಂದು ಹೈಕೋರ್ಟ್ ಮೊರೆ ಹೋಗಿದ್ದರು. ದೂರವಾಣಿ ರೆಕಾರ್ಡಿಂಗ್ ಅನ್ನು ಸಾಕ್ಷ್ಯವಾಗಿ ಪ್ರಸ್ತುತಪಡಿಸುವ ಆದೇಶವನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದರು. ಇದು ತನ್ನ ಖಾಸಗಿತನದ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಮಹಿಳೆ ಪ್ರತಿಪಾದಿಸಿದ್ದರು. ಕೌಟುಂಬಿಕ ನ್ಯಾಯಾಲಯವು ಸಂಭಾಷಣೆಯ ರೆಕಾರ್ಡಿಂಗ್ ಮಂಡನೆಗೆ ಅವಕಾಶ ನೀಡುವ ಮೂಲಕ ಕಾನೂನು ದೋಷ ಎಸಗಿದೆ. ಸಂಭಾಷಣೆಯನ್ನು ಅರ್ಜಿದಾರರಿಗೆ ತಿಳಿಯದೆ ಪ್ರತಿವಾದಿಯು ರೆಕಾರ್ಡ್ ಮಾಡಿದ್ದಾರೆ. ಆದ್ದರಿಂದ ಅದನ್ನು ಅವರ ವಿರುದ್ಧ ಬಳಸಲಾಗುವುದಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.

‘ಪೆಂಡಿಂಗ್ ಇರೋ ಬಿಲ್‌ಗಳಿಗೆ ಎನ್ಓಸಿ ಪಡೆಯೋದಕ್ಕೂ 5%, 10% ಕಮಿಷನ್ ಕೊಡಬೇಕಿದೆ ‘

ಆನೇಕಲ್ ಪಟಾಕಿ‌ ದುರಂತ: ಎಚ್ಚೆತ್ತುಕೊಂಡ ಅಧಿಕಾರಿಗಳಿಂದ ಶೆರೆವಾಡ ಪಟಾಕಿ ಗೋಡೌನ್ ಮೇಲೆ ದಾಳಿ…

ಐಟಿಎಫ್‌ ಪುರುಷರ ನಗದು ಬಹುಮಾನ ಟೆನಿಸ್‌ ಪಂದ್ಯಾವಳಿಗೆ ಧಾರವಾಡ ಸಜ್ಜು

- Advertisement -

Latest Posts

Don't Miss