ಕೋಲಾರ : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಕಳೆದಿದ್ದು ಈಗಾಗಲೆ ಕಾಂಗ್ರೆಸ್ ಸರ್ಕಾರದ ವಿರುದ್ದ ರಾಜ್ಯದ ಜನ ತಿರುಗಿ ಬಿದ್ದಿದ್ದಾರೆ. ಈ ಸರ್ಕಾರ ಜನವಿರೋದಿ ಮತ್ತು ರೈತ ವಿರೋದಿ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ಮುಖಂಡರು ಕೋಲಾರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಹೊಸ್ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಮುಖಂಡರು ರಾಜ್ಯ ಕಾಂಗ್ರೆಸ್ ಸರ್ಕಾರ ಜನಪರವಾಗಿ ಕೆಲಸ ಮಾಡದೆ ಜನವಿರೋದಿ ನೀತಿ ಮತ್ತು ರೈತ ವಿರೋದಿ ನೀತಿ ಅನುಸರಿಸುತ್ತಿದೆ ಎಂದು ಪ್ರತಿಭಟನೆ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ದ ದಿಕ್ಕಾರಗಳ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಲೋಡ್ ಶೆಡ್ಡಿಂಗ್ ನೆಪದಲ್ಲಿ ರಾಜ್ಯದ ಜನರನ್ನುಕತ್ತಲೆಗೆ ತಳ್ಳುತ್ತಿದೆ . ಗುತ್ತಿಗೆದಾರರ ಮೂಲಕ ಹಣ ಸಂಗ್ರಹಿಸುವ 90 % ಸರ್ಕಾರ ಎಂದು ಆರೋಪ ಮಾಡಿದರು
ಸಂಸದ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆದುದ್ದಿ ಈ ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್, ಹಲವಾರು ಮುಖಂಡರು ಭಾಗಿಯಾಗಿದ್ದರು.
ಕಳ್ಳರನ್ನು ಹಿಡಿಯುವವರು ಪೋಲಿಸರು. ಆದರೆ ಪೊಲಿಸರೇ ಕಳ್ಳರಾದಾಗ ಯಾರು ಹಿಡಿಯಬೇಕು?

