- Advertisement -
ಕರ್ನಾಟಕ ಟಿವಿ : ಇನ್ನು ತೆಲಂಗಾಣ ಸರ್ಕಾರ ರೈತರು ಯಾವ ಬೆಳೆಯನ್ನ ಬೆಳೆಯಬೇಕು ಅನ್ನೋದನ್ನ ಇನ್ಮುಂದೆ ನಿರ್ಧಾರ ಮಾಡಲಿದೆ. ರೈತರು ಬೆಳೆದ ಬೆಲೆಗಳಿಗೆ ಸೂಕ್ತ ಬೆಲೆ ದೊರಕಿಸಿಕೊಡುವ ದೃಷ್ಟಿಯಲ್ಲಿ ಹಾಗೂ ರೈತರ ಶ್ರಮಕ್ಕೆ ತಕ್ಕಪ್ರತಿಫಲ ದೊರಕಿಸಿಕೊಡುವ ದೃಷ್ಠಿಯಲ್ಲಿ ಹೊಸ ಕಾರ್ಯತಂತ್ರಕ್ಕೆ ತೆಲಂಗಾಣ ಸಿಎಂ ಚಂದ್ರ ಶೇಖರರಾವ್ ಮುಂದಾಗಿದ್ದಾರೆ. ಯಾರು ಸರ್ಕಾರದ ನಿರ್ಧಾರ ಪಾಲನೆ ಮಾಡಲ್ಲಅವರಿಗೆ ಸರ್ಕಾರ ರೈತ ಬಂಧು ಯೋಜನೆಯಡಿ ವಾರ್ಷಿಕ ಪ್ರತಿ ಎಕರೆಗೆ ನೀಡುವ 10 ಸಾವಿರ ಸಹಾಯಧನದಿಂದ ವಂಚಿತರಾಗಲಿದ್ದಾರೆ. ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಮಾಡುವ ಮೂಲಕ ರೈತರು ಹಾಗೂ ಜನರ ಹಿತ ಕಾಪಾಡಲು ತೆಲಂಗಾಣ ಸರ್ಕಾರ ಮುಂದಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಕೆಲ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.
- Advertisement -