- Advertisement -
ಕೋಲಾರ: ನಗರದಲ್ಲಿ ಎಪಿಎಂಸಿ ಮತ್ತು ಜವಳಿ ಸಚಿವ ಶಿವಾನಂದ ಪಾಟೀಲ್ ಮಾತನಾಡಿ ಎಪಿಎಂಸಿ ಕಾಯ್ದೆಯನ್ನು ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ವಾಪಸ್ ಪಡೆದಿರಲಿಲ್ಲ ಕೇಂದ್ರ ಸರ್ಕಾರ ಮಾತ್ರ ವಾಪಸ್ ಪಡೆದಿತ್ತು ಎನ್ನುವ ಸತ್ಯವನ್ನು ಬಯಲಿಗೆಳೆದರು.
ಸಮಿತಿ ಸದಸ್ಯರು ಮಾರುಕಟ್ಟೆಗಳಲ್ಲಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ನೀಡುತ್ತೇವೆ. ಸದನ ಸಮಿತಿಯ ವರದಿ ಆಧರಿಸಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ರೈತರ ಪ್ರಗತಿಗೆ ತಕ್ಕಂತೆ ಎಪಿಎಂಸಿ ತಿದ್ದುಪಡೆ ಕಾಯ್ದೆಯನ್ನು ಪರಿಶೀಲನೆ ನಡೆಸಲಾಗುತ್ತದೆ.
ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧಿಸಿದೆ.. ಇದರಿಂದ ಬೆಲೆಯೇರಿಕೆ ಆಗಿದೆ. ಕೇಂದ್ರ ಸರ್ಕಾರ ರಫ್ತು ನಿಷೇಧವನ್ನು ವಾಪಸ್ಸು ಪಡೆಯಬೇಕು. ಕೆಲ ವ್ಯಾಪಾರಿಗಳು ಈರುಳ್ಳಿ ಸ್ಟೋರ್ ಮಾಡಿಕೊಂಡು ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಸುತ್ತಿದ್ದಾರೆ, ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದರು.
- Advertisement -