- Advertisement -
ಕರ್ನಾಟಕ ಟಿವಿ : ಲಾಕ್ ಡೌನ್ ನಿಯಮಗಳನ್ನ ಉಲ್ಲಂಘನೆ ಮಾಡಿದ ಸಚಿವ ಇದೀಗ ಬ್ರಿಟನ್ ನಲ್ಲಿ ರಾಜೀನಾಮೆ ನೀಡಿದ್ದಾರೆ.. ಆರ್ಥಿಕತೆ ದೃಷ್ಟಿಯಿಂದ ಬ್ರಿಟನ್ ಲಾಕ್ ಡೌನ್ ಸಡಿಲಿಕೆ ಮಾಡಿದೆ ಆದ್ರೆ ಅನವಶ್ಯಕ ಓಡಾಟಕ್ಕೆ ಕಡಿವಾಣ ಹಾಕಿದೆ. ಇಂಥಹ ಸಂದರ್ಭದಲ್ಲಿ ಸಚಿವ ಡೌಗ್ಲಾಸ್ ರೋಸ್ 425 ಕಿಲೋಮೀಟರ್ ಟ್ರಾವಲ್ ಮಾಡಿದ್ರು. ಇದು ಭಾರೀ ವಿವಾದಕ್ಕೆ ಕಾರಣವಾಗಿದ್ದು . ಇದೀಗ ರಾಜೀನಾಮೆ ನೀಡಿ್ದ್ದಾರೆ.. ಜನರಿಗೆ ಲಾಕ್ ಡೌನ್ ನಿಯಮ ಪಾಲಿಸೋದು ಕಷ್ಟವಾಗ್ತಿದೆ. ಕಾಯಿಲೆ ಬಂದವರನ್ನ ಬಂಧುಗಳು ನೋಡಲು ಸಾಧ್ಯವಾಗ್ತಿಲ್ಲ.. ನಾನು ಕುಟುಂಬಕ್ಕೆ ಟೈಂ ಕೊಡಲು ಸಾಧ್ಯವಾಗ್ತಿಲ್ಲ, ಕ್ಷೇತ್ರದ ಬಗ್ಗೆ ಗಮನ ಹರಿಸಲು ಸಾಧ್ಯವಾಗ್ತಿಲ್ಲಅಂತ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಡೌಗ್ಲಾಸ್ ರೋಸ್ ಹೇಳಿದ್ದಾರೆ.
- Advertisement -

