Sunday, July 6, 2025

Latest Posts

ಶ್ರೀರಂಗಪಟ್ಟಣ ಗಾರ್ಮೆಂಟ್ಸ್ ನೌಕರರ ಪ್ರತಿಭಟನೆ: ಸಂಸದೆ ಸುಮಲತಾ ಭೇಟಿ..

- Advertisement -

ಶ್ರೀರಂಗಪಟ್ಟಣ ಗಾರ್ಮೆಂಟ್ಸ್ ನೌಕರರು ಪ್ರತಿಭಟನೆ ನಡೆಸುತ್ತಿದ್ದು, ಯೂರೋ ಕ್ಲಾಥಿಂಗ್ ಕಂಪನಿಯ ಗೋಕುಲ್ ದಾಸ್ ಗಾರ್ಮೆಂಟ್ಸ್‌ಗೆ ಸಂಸದೆ ಸುಮಲತಾ ಅಂಬರೀಶ್ ಭೇಟಿ ನೀಡಿದರು.

ನೌಕರನ್ನು ಕೆಲಸದಿಂದ ತೆಗೆದು ಕಾರ್ಖಾನೆ ಮುಚ್ಚುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ಗಾರ್ಮೆಂಟ್ಸ್ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದ ಸುಮಲತಾ ಅಂಬರೀಷ್, ಹೊರ ಹಾಕುವ ಆತಂಕದಲ್ಲಿರುವ ನೌಕರರಿಗೆ ಅನ್ಯಾಯವಾಗದಂತೆ ಗಾರ್ಮೆಂಟ್ಸ್ ನಡೆಸಿ ಅವರಿಗೆ ವೇತನ ನೀಡಿ ಎಂದು ಸಂಸದೆ ಸೂಚನೆ ನೀಡಿದ್ದಾರೆ.

ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರೊಂದಿಗೂ ಸುಮಲತಾ ಸಮಾಲೋಚನೆ ನಡೆಸಿದರು. ಚಿತ್ರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಇತರರು ಜೊತೆಯಲಿದ್ದರು.

ದೇಶದಲ್ಲಿ ಲಾಕ್ ಡೌನ್ ಹಿನ್ನಲೆಯಿಂದ ತಯಾರಾದ ವಸ್ತುಗಳು ರಫ್ತಾಗದ ಹಿನ್ನಲೆ ನೌಕರರಿಗೆ ವೇತನ ಒದಗಿಸಲು ಸಾಧ್ಯವಾಗದೆ ಇರುವ ಕಾರ್ಖಾನೆ ಮುಚ್ಚುತ್ತಿದ್ದೇವೆಂದು ಮುಖ್ಯಸ್ಥರು ಕಾರಣ ನೀಡುತ್ತಿದ್ದಾರೆ. ನೌಕರರ ಪರವಾಗಿ ನಿಲ್ಲಲ್ಲು ಸಂಸದರು ಭರವಸೆ ನೀಡಿದ್ದಾರೆ.

- Advertisement -

Latest Posts

Don't Miss