ಕೊರೊನಾ ಮಹಾಮಾರಿಯಿಂದ ಬಳಲಿ ಶಾಸಕ ನಿಧನ..!

ಚೆನೈ : ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಚೆನ್ನೈ ಪಶ್ಚಿಮ ಕ್ಷೇತ್ರದ ಶಾಸಕ ಅನ್ಬಳಗನ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಅನಾರೋಗ್ಯದ ಹಿನ್ನೆಲೆ ಶಾಸಕ ಅನ್ಬಳಗನ್ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್ 2ರಂದು ಕೊರೊನಾ ಸೋಂಕಿರುವುದು ಧೃಡಪಟ್ಟಿದ್ದು, ವೆಂಟಿಲೇಟರ್‌ನಲ್ಲಿಟ್ಟು ಶಾಸಕರಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಶಾಸಕ ಅನ್ಬಳಗನ್ ಸಾವನ್ನಪ್ಪಿದ್ದಾರೆ.

ಅನ್ಬಳಗನ್ ಚೆನ್ನೈ ಪಶ್ಚಿಮ ಕ್ಷೇತ್ರದಿಂದ ಡಿಎಂಕೆ ಶಾಸಕರಾಗಿ ಆಯ್ಕೆಯಾಗಿದ್ದರು.

https://youtu.be/XRtElR7EAr4

About The Author