- Advertisement -
ಮಂಡ್ಯ: ಮಂಡ್ಯದಲ್ಲಿ ಮೈ ಶುಗರ್ ಕಂಪನಿ ಪ್ರಾರಂಭಿಸುವ ಸಲುವಾಗಿ ಮಾತನಾಡಿದ ಸಚಿವ ನಾರಾಯಣಗೌಡ, ಹಿಂದೆ 40 ವರ್ಷಕ್ಕೆ ಗುತ್ತಿಗೆ ನೀಡುವ ತೀರ್ಮಾನ ಬಂದಿತ್ತು. ಸಾವಿರಾರು ಕೋಟಿ ಆಸ್ತಿಇದೆ ಇದನ್ನ ಯಾವುದೇ ಕಾರಣಕ್ಕೂ ಖಾಸಗೀಕರಣಕ್ಕೆ ಕೊಡುವುದು ಬೇಡ ಎಂದು ಒತ್ತಡ ಇತ್ತು. ನಾವೆಲ್ಲರೂ ಸಿಎಂಗೆ ಮನವಿ ಮಾಡಿದ ತಕ್ಷಣ, ಯಾವುದೇ ಕಾರಣಕ್ಕೂ ಖಾಸಗೀಕರಣಕ್ಕೆ ಕೊಡುವುದಿಲ್ಲವೆಂದು ತೀರ್ಮಾನ ತೆಗೆದುಕೊಂಡಿದ್ದಾರೆ ಎಂದರು.

ಅಲ್ಲದೇ, ಕಾರ್ಖಾನೆ ಪ್ರಾರಂಭಿಸಲು ಒ &ಎಂ ಮಾಡಬೇಕಾಗುತ್ತದೆ. ನಮ್ಮಲ್ಲಿ ಇರುವಂತ ನೌಕರರಿಗೆ ಸ್ವತಃ ರಿಟೇಡ್ ಕೊಡಲು ಸರ್ಕಾರ ಒಪ್ಪಿಕೊಂಡಿದೆ.
ನಮ್ಮ ಸಕ್ಕರೆ ಮಂತ್ರಿಗಳಿಗೆ ಮುಖ್ಯಮಂತ್ರಿಗಳು 25 ಕೋಟಿ ಸರ್ಕಾರದಿಂದ ಕೊಡ್ತಿವಿ, ಉಳಿದ ಹಣವನ್ನ ಲೋನ್ ತೆಗೆದುಕೊಂಡು ಮೈಶುಗರ್ ಕಾರ್ಖಾನೆಯನ್ನು ಶೀಘ್ರದಲ್ಲೇ ಶುರುಮಾಡುವಂತೆ ಹೇಳಿದ್ದಾರೆ. ಸಕ್ಕರೆ ಸಚಿವರು ರೈತರಿಗೆ ಶಕ್ತಿತುಂಬಲು ಇಂದು ಬಂದಿದ್ದಾರೆ ಎಂದರು.
- Advertisement -