ಕರ್ನಾಟಕದ ಪ್ರಮುಖ ಪ್ರಶಸ್ತಿಗಳ ಬಗ್ಗೆ ನಿಮಗೆಷ್ಟು ಗೊತ್ತು..?

ಪದ್ಮಶ್ರೀ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ಪದ್ಮ ವಿಭೂಷಣ ಅವಾರ್ಡ್, ಭಾರತ ರತ್ನ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ, ಆಸ್ಕರ್ ಅವಾರ್ಡ್ ಹೀಗೆ ಹಲವು ಅವಾರ್ಡ್‌ಗಳ ಬಗ್ಗೆ ನಾವು ಕೇಳಿರ್ತಿವಿ. ರಾಷ್ಟ್ರಮಟ್ಟ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿಯನ್ನ ನೀಡಲಾಗತ್ತೆ. ಆದ್ರೆ ಕರ್ನಾಟಕದಲ್ಲೇ ರಾಜ್ಯ ಮಟ್ಟದ ಸಾಧನೆ ಮಾಡಿದವರಿಗೆ 10 ತರಹದ ಪ್ರಶಸ್ತಿಗಳನ್ನ ನೀಡಲಾಗತ್ತೆ. ಆ ಪ್ರಶಸ್ತಿಗಳು ಯಾವುದು..? ಯಾಕೆ ಕೊಡಲಾಗತ್ತೆ ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ.

1.. ಪಂಪ ಪ್ರಶಸ್ತಿ: ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸಿದವರಿಗೆ ಪಂಪ ಪ್ರಶಸ್ತಿ ನೀಡಲಾಗತ್ತೆ.

2.. ನಾಡೋಜ ಪ್ರಶಸ್ತಿ : ಅತ್ಯುನ್ನತ ಮಟ್ಟದ ಸಾಹಿತ್ಯ ರಚನೆ ಮಾಡಿದವರಿಗೆ ನಾಡೋಜ ಪ್ರಶಸ್ತಿ ನೀಡಲಾಗತ್ತೆ.

3.. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ: ಇದು ಪ್ರತಿ ವರ್ಷ ಉತ್ತಮ ಕೃತಿ ರಚನಾಕಾರರಿಗೆ ನೀಡುವ ಪ್ರಶಸ್ತಿ.

4.. ಕೆಂಪೇಗೌಡ ಪ್ರಶಸ್ತಿ: ಬೆಂಗಳೂರು ನಗರದ ಅಭಿವೃದ್ಧಿಗೆ ಶ್ರಮಿಸಿದವರಿಗೆ ಮಹಾನಗರ ಪಾಲಿಕೆಯಿಂದ ಕೆಂಪೇಗೌಡ ಪ್ರಶಸ್ತಿ ನೀಡಲಾಗತ್ತೆ.

5.. ಡಾ.ರಾಜ್‌ಕುಮಾರ್ ಪ್ರಶಸ್ತಿ: ಚಲನಚಿತ್ರ ರಂಗದಲ್ಲಿ ಜೀವಮಾನ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗತ್ತೆ.

6.. ಪುಟ್ಟಣ್ಣ ಕಣಗಾಲ್ ಪ್ರಶಸ್ತಿ: ಚಿತ್ರರಂಗಕ್ಕೆ ನೀಡಿದ ಒಟ್ಟಾರೆ ಕೊಡುಗೆಗಾಗಿ ನಿರ್ದೇಶಕರಿಗೆ ಈ ಪ್ರಶಸ್ತಿಯನ್ನ ನೀಡಲಾಗತ್ತೆ.

7..ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ: ಈ ಪ್ರಶಸ್ತಿಯನ್ನ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದವರಿಗೆ ನೀಡಲಾಗತ್ತೆ.

8.. ಕರ್ನಾಟಕ ರತ್ನ ಅವಾರ್ಡ್: ಇದು ರಾಜ್ಯ ಸರ್ಕಾರ ನೀಡುವ ಕರ್ನಾಟಕದ ಅತ್ಯುನ್ನತ ನಾಗರೀಕ ಪ್ರಶಸ್ತಿ.

9.. ರಾಜ್ಯೋತ್ಸವ ಪ್ರಶಸ್ತಿ: ಕನ್ನಡದ ಹೋರಾಟಗಾರರು, ಕರ್ನಾಟಕದ ಏಕೀಕರಣಕ್ಕೆ ಶ್ರಮಿಸುವವರು, ಕನ್ನಡದ ಏಳಿಗೆಗಾಗಿ ಶ್ರಮಿಸುವವರಿಗೆ, ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿದ ಆಟಗಾರರಿಗೆ ಈ ಪ್ರಶಸ್ತಿಯನ್ನ ಪ್ರತಿವರ್ಷ ನೀಡಲಾಗತ್ತೆ.

10.. ಇನ್ನು ಸಂಗೀತ ಮತ್ತು ನೃತ್ಯದಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿಯಿಂದ ಪ್ರಶಸ್ತಿಗಳು ಲಭಿಸುತ್ತದೆ.

https://youtu.be/rWccIkb0IVM

About The Author