Friday, July 11, 2025

Latest Posts

ಲವ್ ಮಾಕ್ಟೇಲ್ ಸಿಕ್ವೇಲ್‌ಗೆ ಸಜ್ಜಾದ ಕೃಷ್ಣ- ಮಿಲನಾ: ದೇವಸ್ಥಾನದಲ್ಲಿ ನಡೀತು ಸ್ಕ್ರಿಪ್ಟ್ ಪೂಜೆ..

- Advertisement -

ಲವ್ ಮಾಕ್ಟೇಲ್.. ಈ ವರ್ಷ ಸಖತ್ ಸದ್ದು ಮಾಡಿದ್ದ ಚಿತ್ರ. ಥಿಯೇಟರ್‌ನಲ್ಲಿ ಅಷ್ಟೇನು ವೀವ್ಸ್ ಗಳಿಸದ ಲವ್ ಮಾಕ್ಟೇಲ್, ಅಮೇಜಾನ್ ಪ್ರೈಮ್‌ನಲ್ಲಿ ಸಿನಿಪ್ರಿಯರ ಮನ ಗೆದ್ದಿತ್ತು. ಅಯ್ಯೋ ಇಷ್ಟು ಚಂದದ ಸಿನಿಮಾವನ್ನ ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡುಬಿಟ್ವಲ್ಲ ಎಂದು ಬೇಜಾರಾದ ವೀಕ್ಷಕರು ಮತ್ತೊಮ್ಮೆ ಥಿಯೇಟರ್‌ನಲ್ಲಿ ಈ ಸಿನಿಮಾ ರಿಲೀಸ್ ಮಾಡಲು ರಿಕ್ವೆಸ್ಟ್ ಮಾಡಿದರು. ಅಷ್ಟರ ಮಟ್ಟಿಗೆ ಜನಪ್ರಿಯತೆ ಪಡೆಯಿತು.

ಈ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ತೆರೆಮರೆಯಲ್ಲಿ ಟ್ಯಾಲೆಂಟ್ ತೋರಿಸುತ್ತಿದ್ದ ನಟಿ ಮಿಲನಾ ನಾಗರಾಜ್ ಕನ್ನಡದ ಟಾಪ್ ನಟಿಯರ ಲೀಸ್ಟ್‌ಗೆ ಸೇರಿದ್ರು. ಇನ್ನು ಡಾರ್ಲಿಂಗ್ ಕೃಷ್ಣ ಬೆಸ್ಟ್ ಡೈರೆಕ್ಟರ್ ವಿತ್ ಆ್ಯಕ್ಟರ್ ಅನ್ನೋ ಪಟ್ಟ ಗಿಟ್ಟಿಸಿಕೊಂಡರು. ಇವರಿಬ್ಬರ ಸಿನಿ ಲೈಫ್‌ಗೆ ಬೆಸ್ಟ್ ಯೂಟರ್ನ್ ಕೊಟ್ಟ ಚಿತ್ರ ಲವ್ ಮಾಕ್‌ಟೇಲ್.

ಇಷ್ಟೇ ಅಲ್ಲದೇ, ಮಿಲನಾ ಮತ್ತು ಕೃಷ್ಣ ಪ್ರೇಮಿಗಳು ಎಂಬ ಸುದ್ದಿ ಕೂಡ ಲವ್‌ಮಾಕ್ಟೇಲ್ ಸಿನಿಮಾ ಮೂಲಕವೇ ಎಲ್ಲರಿಗೂ ಗೊತ್ತಾಯ್ತು. ಇದೀಗ ಲವ್‌ಮಾಕ್ಟೇಲ್ ಸಿಕ್ವೇಲ್‌ ಕೂಡ ಬರಲಿದ್ದು, ಇಂದು ಸಿನಿಮಾ ಸ್ಕ್ರಿಪ್ಟ್ ಪೂಜೆ ನಡೆದಿದೆ.

https://youtu.be/zqAChjKyLAc

ಇನ್ನು ಲಾಕ್‌ಡೌನ್ ಟೈಮಲ್ಲಿ ಲವ್ ಮಾಕ್ಟೇಲ್ ಚಿತ್ರದ ಮುಂದುವರಿದ ಭಾಗದ ಸ್ಕ್ರಿಪ್ಟ್ ರೆಡಿಯಾಗಿದ್ದು, ಆದಿ ಅದಿತಿಯನ್ನ ಬಿಟ್ಟ ಬಳಿಕ ಆತನ ಜೀವನದಲ್ಲಿ ಏನೆಲ್ಲ ನಡೆಯಲಿದೆ ಎಂಬ ಬಗ್ಗೆ ಸ್ಕ್ರಿಪ್ಟ್ ರೆಡಿಯಾಗಿದೆ. ಲವ್ ಮಾಕ್ಟೇಲ್‌ಗಿಂತ ಇದರ ಸೀಕ್ವೆಲ್‌ನಲ್ಲಿ ಹೆಚ್ಚು ಮಜಾ ಇದೆ, ಪ್ರೀತಿ ತಮಾಷೆ ಎಲ್ಲವೂ ಇದೆ ಅಂತಾರೆ ಡಾರ್ಲಿಂಗ್ ಕೃಷ್ಣ.

ಸದ್ಯ ಸಿನಿಮಾ ಶೂಟಿಂಗ್‌ಗೆ ಅನುಮತಿ ಇಲ್ಲದ ಕಾರಣ, ಸರ್ಕಾರದಿಂದ ಶೂಟಿಂಗ್‌ಗೆ ಅನುಮತಿ ಸಿಕ್ಕ ಕೂಡಲೇ ಶೂಟಿಂಗ್ ಶುರು ಮಾಡಲು ಕೃಷ್ಣ ನಿರ್ಧರಿಸಿದ್ದಾರೆ.

- Advertisement -

Latest Posts

Don't Miss