ಸದ್ಯ ಭಾರತದ ಪ್ರಜೆಗಳಿಗೆ ಕಚೇರಿ ಕೆಲಸಗಳಲ್ಲಿ ಉಪಯೋಗಕ್ಕೆ ಬರುವಂಥದ್ದು ಆಧಾರ ಕಾರ್ಡ್. ಸಿಮ್ ಮಾಡಿಸುವಾಗ, ಬ್ಯಾಂಕ್‌ಗೆ ಹೋದ್ರೆ, ರಿಜಿಸ್ಟ್ರೇಷನ್ ಸಂದರ್ಭ. ಎಲ್ಲೇ ಹೋದ್ರು ಆಧಾರ್ ನಂಬರ್ ಇಲ್ಲದಿದ್ದರೆ ಯಾವ ಕೆಲಸವೂ ನಡಿಯೋದಿಲ್ಲ.

ಇದೀಗ ಜೂನ್ 31ರೊಳಗೆ ಪಾನ್ ಕಾರ್ಡ್‌ಗೆ ಆಧಾರ್ ನಂಬರ್ ಜೋಡಿಸದಿದ್ದರೆ 10 ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ. ನಿಮ್ಮ ಪಾನ್ ಕಾರ್ಡ್ ಸಂಖ್ಯೆ ಜೊತೆ ಆಧಾರ್ ಕಾರ್ಡ್ ಸಂಖ್ಯೆ ಲಿಂಕ್ ಮಾಡಬೇಕು. ಇಲ್ಲದಿದ್ದರೆ ಆದಾಯ ತೆರಿಗೆ ಕಾಯ್ದೆ 272B ಅನ್ವಯ ಹತ್ತು ಸಾವಿರ ರೂಪಾಯಿ ದಂಡವಿಧಿಸಬಹುದಾಗಿದೆ.
ಮೊದಲು ಪಾನ್ ಕಾರ್ಡ್ ಸಂಖ್ಯೆ ಜೊತೆ ಆಧಾರ್ ಕಾರ್ಡ್ ಸಂಖ್ಯೆ ಲಿಂಕ್ ಮಾಡಲು ಮಾರ್ಚ್ 30ರ ತನಕ ಸಮಯ ನೀಡಲಾಗಿತ್ತು. ಆದ್ರೆ ಕೊರೊನಾ ಭೀತಿ, ಲಾಕ್‌ಡೌನ್ ಕಾರಣದಿಂದ ಜೂನ್ 31ರ ತನಕ ಸಮಯ ವಿಸ್ತರಿಸಲಾಗಿತ್ತು.
ಇನ್ನು ಪಾನ್ ಕಾರ್ಡ್ ಸಂಖ್ಯೆ ಜೊತೆ ಆಧಾರ್ ಕಾರ್ಡ್ ಸಂಖ್ಯೆ ಲಿಂಕ್ ಮಾಡೋದಾದ್ರೂ ಹೇಗೆ ಎಂಬ ಪ್ರಶ್ನೆಗೆ ಉತ್ತರ, ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ ನಂಬರನ್ನ ಆದಾಯ ತೆರಿಗೆ ಇಲಾಖೆಗೆ ಎಸ್‌ಎಂಎಸ್ ಮಾಡಿ. ಅಥವಾ www.incometaxindiaefiling.gov.in ವೆಬ್ಸೈಟ್‌ಗೆ ಭೇಟಿ ನೀಡಿ ಆಧಾರ್- ಪ್ಯಾನ್ ನಂಬರ್ ಲಿಂಕ್ ಮಾಡಿ.
ಲೋನ್ ಅಪ್ಲೈ ಮಾಡೋದು ಹೇಗೆ..? ಪ್ರಧಾನ ಮಂತ್ರಿ ಆವಾಸ್ ಯೋಜನೆ ಲಾಭ ಪಡೆಯೋದು ಹೀಗೆ..? ಯಾವ ಬ್ಯಾಂಕ್ ಸೇಫ್ ಅಲ್ಲ..? ಎಲ್ಲಾ ರೀತಿಯ ಹಣಕಾಸಿನ ಮಾಹಿತಿಗಾಗಿ ಈ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.. ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ..