ಇದು ವೀಕೆಂಡ್ ವಿತ್ ರಮೇಶ್ ಅಲ್ಲ, ವೀಕ್ ಡೇ ವಿತ್ ರಮೇಶ್ ..!

ರಮೇಶ್ ಅರವಿಂದ್.. ಸ್ಯಾಂಡಲ್‌ವುಡ್‌ನಲ್ಲಿ ನಟ, ನಿರ್ದೇಶಕ, ನಿರ್ಮಾಪಕ ಎಂದು ಗುರುತಿಸಿಕೊಂಡರೂ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮೂಲಕ ವೀಕ್ಷಕರಿಗೆ ಹತ್ತಿರಾದರು. ಇದೀಗ ರಮೇಶ್ ವೀಕ್ ಡೇ ವಿತ್ ರಮೇಶ್ ಎಂಬ ಕಾರ್ಯಕ್ರಮದಲ್ಲಿ ಬರಲಿದ್ದಾರೆ.

ಅರೆ ಇದೇನಿದು.. ವೀಕ್ ಡೇ ವಿತ್ ರಮೇಶ್ ಯಾವ ಚಾನೆಲ್‌ನಲ್ಲಿ ಬರಲಿದೆ..? ಎಷ್ಟೊತ್ತಿಗೆ ಬರಲಿದೆ..? ಅಂತಾ ಯೋಚಿಸೋಕ್ಕೆ ಶುರು ಮಾಡಿದ್ರಾ..? ಅವ್ರು ಸ್ಯಾಟಲೈಟ್ ಚಾನೆಲ್ ಬದಲಾಗಿ ಯೂಟ್ಯೂಬ್ ಚಾನೆಲ್‌ನಲ್ಲಿ ಬರಲಿದ್ದಾರೆ.

ಹೌದು, ರಾಜ್ಯ ಸರ್ಕಾರ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗಾಗಿ ವಿಜಯೀ ಭವ ಎಂಬ ಯೂಟ್ಯೂಬ್ ಚಾನೆಲ್ ಶುರು ಮಾಡಿದ್ದು, ಈ ಚಾನೆಲ್ ಮೂಲಕ ರಾಜ್ಯದ ಲಕ್ಷಾಂತರ ಮಕ್ಕಳೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆ ‘ವೀಕ್‌ ಡೇ ವಿತ್‌ ರಮೇಶ್‌’ ಶೀರ್ಷಿಕೆ ನೀಡಿದೆ.

ಜೂನ್ 18ರಂದು ಬೆಳಿಗ್ಗೆ 10:30ಕ್ಕೆ ವಿಜಯೀ ಭವ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ ಡೇ ವಿತ್ ರಮೇಶ್ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

https://youtu.be/oIFBoiy2VMo

ಕೊರೊನಾಗಿಂತ ಹೆಚ್ಚಿನ ಸಂಕಷ್ಟ ಬರಬಹುದು. ಆ ವೇಳೆಯಲ್ಲೂ ಕೂಡ ಎಲ್ಲರೂ ಅದನ್ನ ನಿಭಾಯಿಸಲು ಕಲಿಯಬೇಕು. ವೀಕ್ ಎಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹಲವು ಸಾಧಕರ ಅನುಭವಗಳನ್ನ ರಮೇಶ್ ಅರವಿಂದ್ ಕೇಳಿದ್ದಾರೆ. ಅವುಗಳೇ ವಿದ್ಯಾರ್ಥಿಗಳಿಗೆ ಹೇಳಲಿದ್ದಾರೆ.

About The Author