ಮಂಗಳವಾರ ಯಾವುದೇ ಕೆಲಸಕ್ಕೆ ಕೈ ಹಾಕಿದರೆ ಮತ್ತೆ ಆ ಕೆಲಸವನ್ನ ಪುನರಾರಂಭಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೇ, ಹಲವು ಕೆಲಸಗಳನ್ನ ಮಂಗಳವಾರ ಮಾಡುವಂತಿಲ್ಲ.

ಮಂಗಳವಾರ ಮಾಂಸ ತಿನ್ನಕೂಡದು, ಮದ್ಯ ಸೇವಿಸಕೂಡದು. ಕೆಲ ಕಡೆ ಸೋಮವಾರ, ಶನಿವಾರ ಮಾಂಸ ಸೇವಿಸಕೂಡದೆಂಬ ಪದ್ಧತಿ ಇದೆ. ಆದ್ರೆ ಮಹಾರಾಷ್ಟ್ರದಲ್ಲಿ, ಮರಾಠಿಗರಲ್ಲಿ ಮಂಗಳವಾರ ಮಾಂಸ ಮದ್ಯ ಸೇವಿಸಬಾರದೆಂಬ ಪದ್ಧತಿ ಇದೆ. ಏಕೆಂದರೆ ಮಂಗಳವಾರ ಗಣಪತಿಗೆ ಸಂಬಂಧಿಸಿದ ದಿನವಾಗಿರುವುದರಿಂದ ಮಂಗಳವಾರ ಮದ್ಯ ಮಾಂಸ ಸೇವನೆ ನಿಷೇಧಿಸಲಾಗಿದೆ. ಇನ್ನು ಯಾರು ಈ ದಿನ ಮದ್ಯ ಮಾಂಸ ಸೇವಿಸುತ್ತಾರೋ ಅಂಥವರ ಸಂಸಾರದಲ್ಲಿ ಬರೀ ಕಷ್ಟಗಳೇ ತುಂಬಿಕೊಳ್ಳುತ್ತದೆಯಂತೆ. ಮತ್ತು ಆತ ಆರ್ಥಿಕವಾಗಿ ಹಿಂದುಳಿಯುತ್ತಾನೆ.
ನೀವೂ ಸಲೂನ್ ಶಾಪ್ಗಳಿಗೆ ಮಂಗಳವಾರ ರಜಾ ನೀಡಿರುವುದನ್ನ ನೋಡಿರುತ್ತೀರಿ. ಇದಕ್ಕೆ ಕಾರಣವೇನೆಂದರೆ, ಮಂಗಳವಾರ ಕೂದಲು ಕತ್ತರಿಸುವಂತಿಲ್ಲ. ಅಲ್ಲದೇ, ಈ ದಿನ ಉಗುರು ಕತ್ತರಿಸುವಂತಿಲ್ಲ, ಗಡ್ಡ ತೆಗೆಯುವಂತಿಲ್ಲ.
ಮಂಗಳವಾರ ಶುಭಕಾರ್ಯ ಮಾಡಬಾರದು ಎನ್ನಲಾಗುತ್ತದೆ. ಆದ್ದರಿಂದ ಈ ದಿನ ಯಾರಿಂದಾದರೂ ಹಣ ಕೇಳುವುದು, ಲೋನ್ ಪಡೆಯುವ ಕೆಲಸಕ್ಕೆ ಕೈ ಹಾಕಬೇಡಿ. ಹೀಗೆ ಮಾಡುವುದರಿಂದ ಆ ಹಣವನ್ನ ಹಿಂದಿರುಗಿಸಲು ತುಂಬ ಸಮಯ ಹಿಡಿಯುತ್ತದೆ.
ಯಾವುದೇ ಕಾರಣಕ್ಕೂ ಮಂಗಳವಾರ ಪಾತ್ರೆಗಳು, ಕಬ್ಬಿಣದ ವಸ್ತುಗಳು, ಅಥವಾ ವಾಹನ ಕೊಂಡುಕೊಳ್ಳಬೇಡಿ.
ಮಂಗಳವಾರ ಸೌಂದರ್ಯವರ್ಧಕಗಳನ್ನ, ಅಥವಾ ಆಭರಣಗಳನ್ನ ಕೊಂಡುಕೊಂಡರೆ ನಿಮ್ಮ ದಾಂಪತ್ಯ ಜೀವನದಲ್ಲಿ ವಿರಸ ಉಂಟಾಗುವ ಸಂಭವವಿರುತ್ತದೆ.
ಅಲ್ಲದೇ, ಮಂಗಳವಾದ ದೈಹಿಕ ಸಂಪರ್ಕ ಹೊಂದಬಾರದು. ಹೀಗೆ ಮಾಡಿದ್ದಲ್ಲಿ ಸಂಬಂಧದಲ್ಲಿ ಬಿರುಕುಂಟಾಗುವ ಸಾಧ್ಯತೆ ಇರುತ್ತದೆ. ಅಥವಾ ಸಂಸಾರದಲ್ಲಿ ಕೆಲ ಸಮಸ್ಯೆಗಳು ಬಂದೊದಗುತ್ತದೆ.
ಮಂಗಳವಾರ ಬಟ್ಟೆ ಖರೀದಿಸಬೇಡಿ. ಅದರಲ್ಲೂ ಕಪ್ಪು ಬಟ್ಟೆ ಖರೀದಿಸಲೇಬೇಡಿ.
ಇನ್ನು ಮಂಗಳವಾರ ಮತ್ತು ಶುಕ್ರವಾರ ಹೆಣ್ಣುಮಕ್ಕಳನ್ನ ಮನೆಯಿಂದ ಹೊರಗೆ ಕಳಿಸುವುದಿಲ್ಲ. ಹೀಗೆ ಮಾಡುವುದರಿಂದ ಮಹಾಲಕ್ಷ್ಮಿಯನ್ನ ಹೊರಗೆ ಕಳಿಸಿದಂತಾಗುತ್ತದೆ ಎಂಬುದು ನಂಬಿಕೆ.
ಇನ್ನು ಮಂಗಳವಾರ ಶ್ರೀಸಿದ್ಧಿವಿನಾಯಕ ಮತ್ತು ಹನುಮಂತನನ್ನು ಆರಾಧಿಸುವ ದಿನ. ಇಂದು ಗಣಪತಿಗೆ ಮತ್ತು ಮಾರುತಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲದೇ, ಗಣಪತಿ ಸ್ತೋತ್ರ ಮತ್ತು ಹನುಮನ ಚಾಲೀಸಾವನ್ನು ಪಠಿಸುವುದರಿಂದ ಒಳಿತಾಗುತ್ತದೆ ಎಂದು ನಂಬಲಾಗಿದೆ.
