ಕೊರೊನಾ ಮಹಾಮಾರಿಗಾಗಿ ಬಾಬಾ ರಾಮ್‌ದೇವ್ ನೇತೃತ್ವದ ಪತಂಜಲಿ ಕಂಪನಿ ಔಷಧಿ ಕಂಡು ಹಿಡಿದಿದ್ದು, ಇಂದು ಆ ಔಷಧಿಯನ್ನು ಬಿಡುಗಡೆ ಮಾಡಿದೆ.

ಉತ್ತರಪ್ರದೇಶದ ಹರಿದ್ವಾರದಲ್ಲಿ ಔಷಧಿ ಬಿಡುಗಡೆ ಮಾಡಿ ಮಾತನಾಡಿದ ಬಾಬಾ ರಾಮ್‌ದೇವ್, ಕೊರೊನಾ ವೈರಸ್‌ಗಾಗಿ ನಾವು ಆಯುರ್ವೇದಿಕ್ ಸಂಶೋಧನಾತ್ಮಕ ಔಷಧಿ ಕಂಡುಹಿಡಿದಿದ್ದೇವೆ. ಈಗಾಗಲೇ ಔಷಧಿ ಬಗ್ಗೆ ಕ್ಲಿನಿಕಲ್ ಟ್ರಯಲ್ ನಡೆಸಲಾಗಿದೆ.
ಈ ವೇಳೆ ಪತಂಜಲಿ ನಡೆಸಿದ ಅಧ್ಯಯನದಲ್ಲಿ ಶೇಕಡಾ 60ರಷ್ಟು ರೋಗಿಗಳು ಮೂರು ದಿನದಲ್ಲಿ ಗುಣಮುಖರಾಗಿದ್ದಾರೆ. ಶೇಕಡಾ ನೂರರಷ್ಟು ರೋಗಿಗಳು 7 ದಿನದಲ್ಲಿ ಗುಣಮುಖರಾಗಿದ್ದಾರೆ. ಅಲ್ಲದೇ ಟ್ರಯಲ್ ವೇಳೆ, ಯಾವುದೇ ರೋಗಿಗಳು ಮೃತಪಟ್ಟಿಲ್ಲ ಎಂದು ಬಾಬಾ ರಾಮ್‌ದೇವ್ ಸ್ಪಷ್ಟನೆ ನೀಡಿದ್ದಾರೆ.
ಅಲ್ಲದೇ, ಜೈಪುರದ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಹರಿದ್ವಾರ ಪತಂಜಲಿ ಸಂಶೋಧನಾ ಸಂಸ್ಥೆ ಈ ಟ್ರಯಲ್ ನಡೆಸಿ ಸಕ್ಸಸ್ ಕಂಡಿದ್ದಾರೆ. ಇನ್ನು ಈ ಔಷಧಿಗೆ ಕೋರೋಲಿನ್ ಎಂಬ ಹೆಸರಿಡಲಾಗಿದೆ.
ಯಾವುದಾದರೂ ರೋಗಕ್ಕೆ ಔಷಧಿ ಕಂಡು ಹಿಡಿಯಲು ಒಂದು ವರ್ಷ, 2 ವರ್ಷ ಅಥವಾ ಹಲವಾರು ವರ್ಷ ತಗಲುತ್ತದೆ. ಆದ್ರೆ ಪತಂಜಲಿ ಬರೀ 6 ತಿಂಗಳಲ್ಲೇ ಔಷಧಿ ಕಂಡುಹಿಡಿದು ಅದನ್ನ ಟ್ರಯಲ್ ಮಾಡಿ ಸಕ್ಸಸ್ ಕಂಡಿದೆ.
