Saturday, July 5, 2025

Latest Posts

ವಿಶ್ವಯೋಗ ದಿನಕ್ಕೆ ಸಿದ್ಧತೆ: ಉಚಿತ ತರಬೇತಿ ನೀಡುವ ಶ್ರೀಧರ ಹೊಸಮನಿ

- Advertisement -

Hubli News: ಹುಬ್ಬಳ್ಳಿ: ರೋಗದಿಂದ ಮುಕ್ತವಾಗಲು ಯೋಗ ಬಹುದೊಡ್ಡ ಮಾರ್ಗೋಪಾಯವಾಗಿದೆ. ಈ ನಿಟ್ಟಿನಲ್ಲಿ ಜೂ.21ನ್ನು ವಿಶ್ವ ಯೋಗ ದಿನವಾಗಿ ಆಚರಣೆ ಮಾಡುವ ಮೂಲಕ ರೋಗ ಮುಕ್ತ ಜೀವನದ ಸಂದೇಶವನ್ನು ಸಾರಲು ಈಗಾಗಲೇ ಸಾಕಷ್ಟು ಸಿದ್ಧತೆ ಮಾಡಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬುವಂತೆ ಯೋಗಪಟು ಡಾ. ಶ್ರೀಧರ ಹೊಸಮನಿಯವರು ವಿನೂತನ ಅಭಿಯಾನದ ಮೂಲಕ ಯೋಗ ಪರಂಪರೆಯ ಪರಿಚಯ ಮಾಡುತ್ತಿದ್ದಾರೆ.

ಸುಮಾರು ದಿನಗಳಿಂದ‌ ಯೋಗದಲ್ಲಿ ಸಾಧನೆ ಮಾಡುವ ಮೂಲಕ ಗೌರವ ಡಾಕ್ಟರೇಟ್ ಪಡೆದಿರುವ ಶ್ರೀಧರ್ ಹೊಸಮನಿಯವರು ಈಗ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಯೋಗಾಭ್ಯಾಸ ಮಾಡಿಸುತ್ತಿದ್ದಾರೆ. ಹೌದು.. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಯೋಗದ ತರಬೇತಿಯನ್ನು ಉಚಿತವಾಗಿ ನೀಡುವ ಮೂಲಕ ಸಾಮಾಜಿಕ ಸೇವೆಯನ್ನು ಮಾಡುತ್ತಿದ್ದಾರೆ. ಶಾಲೆಯ ಆವರಣದಲ್ಲಿಯೇ ಸ್ವಯಂಪ್ರೇರಿತ ವೇದಿಕೆ ಸಿದ್ಧಮಾಡಿಕೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಹಾಗೂ ತರಬೇತಿ ನೀಡುತ್ತಿದ್ದಾರೆ.

ಇನ್ನೂ ಈ ಬಾರಿಗೆ ಬಹುದೊಡ್ಡ ಸಂದೇಶವನ್ನು ಕೊಡಮಾಡುವ ಸದುದ್ದೇಶದಿಂದ‌ ನಿರಂತರ ತರಬೇತಿ ನೀಡುತ್ತಿದ್ದಾರೆ. ಹುಬ್ಬಳ್ಳಿಯ ಉಣಕಲ್ ಮೆಟ್ರಿಕ್ ನಂತರದ ಬಾಲಕಿಯರ ವಸತಿ ಶಾಲೆ ಸೇರಿದಂತೆ ಹುಬ್ಬಳ್ಳಿ ತಾಲ್ಲೂಕಿನ ಬಹುತೇಕ ಶಾಲೆ, ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡುತ್ತಿರುವುದು ವಿಶೇಷವಾಗಿದೆ.

- Advertisement -

Latest Posts

Don't Miss