Dharwad News: ಧಾರವಾಡ: ಧಾರವಾಡದಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಗಣಿಗಾರಿಕೆ ವಿಚಾರವಾಗಿ ಹೇಳಿಕೆ ಕೊಟ್ಟಿದ್ದಾರೆ.
ನಾನು ಮಂತ್ರಿ ಆದ ಮೆಲೆ ಒಪ್ಪಿಗೆ ಕೊಟ್ಟಿಲ್ಲ ೨೦೧೬ ರಲ್ಲಿ ಅರಣ್ಯ ಪ್ರದೇಶದಲ್ಲಿ ರೆಕೆಮೆಂಡೆಶನ್ ರಾಜ್ಯ ಸರಕಾರದಿಂದ ದೆಹಲಿಗೆ ಹೋಗಿದೆ. ಕೇಂದ್ರ ಸರಕಾರ 2018 ರಲ್ಲಿ ಒಪ್ಪಿಗೆ ಕೊಟ್ಟಿದೆ. ಸದ್ಯ ನಾನು ಸಚಿವನಾದ ಬಳಿಕ ಪೈಲ್ಸ್ ಕ್ಲಿಯರ್ ಗಾಗಿ ಬಂದಿದೆ. ಕೇಂದ್ರ ಸರಕಾರದ ಹಣಕಾಸು ಇಲಾಖೆಯಿಂದ ಒಪ್ಪಿಗೆ ಕೇಳಿದೆ. ಸದ್ಯ ನಾನು ಹೊಸದಾಗಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಪರಮಿಶನ್ ಕೊಟ್ಟಿಲ್ಲ. ನನ್ನ ಕಚೇರಿ ಯಾವಾಗಿದ್ರು ಓಪನ್ ದಾಖಲಾತಿಗಳು ಸರಿಯಾಗಿ ಇದ್ರೆ ಯಾರು ಬೇಕಾದ್ರೂ ಬಂದು ಮಾಹಿತಿ ಕೇಳಲಿ. ಹೊಸದಾಗಿ ಯಾವುದೆ ಮೈನಿಂಗ್ ಗೆ ಅನುಮತಿ ಕೊಟ್ಟಿಲ್ಲ, ಕಾರಿಡಾರ್ ವಿಚಾರವಾಗಿ, ಕಳೆದ ಹಲವಾರು ವರ್ಷಗಳಿಂದ ಚರ್ಚೆ ನಡೆದಿದೆ. ಕೇಂದ್ರ ಸರಕಾರ ಇತ್ತಿಚಿಗೆ, ಕೆಲವೊಂದಿಷ್ಟು ಆತ್ಮ ನಿರ್ಬರ ಯೋಜನೆಯಲ್ಲಿ ಕೆಲವೊಂದಿಷ್ಟು ಪಾಲಿಸಿಗಳನ್ನ ನೀಡುತ್ತಿದೆ. ರಾಜ್ಯದಲ್ಲಿ ಕೈಗಾರಿಕೆಗಳನ್ನ ತೆಗೆಯಲು ನಮ್ಮ ಇಲಾಖೆಯಿಂದ ನಾನು ಪ್ರಾಮಾಣಿಕ ಕೆಲಸವನ್ನು ಮಾಡುತ್ತೆನೆ ಎಂದು ಹೇಳಿದ್ದಾರೆ.
ಮಹದಾಯಿ ನಿರಾವರಿ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಹಲವಾರು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿದೆ. ನಾನು ಇವಾಗ ಮಂತ್ರಿಯಾಗಿ 15 ದಿನಗಳಾಗಿದೆ. ನಾನು ಇಗಾಗಲೆ ಮಹದಾಯಿ ವಿಚಾರವಾಗಿ ಮಾತನಾಡಿದ್ದೆನೆ. ಮಹದಾಯಿ ವಿಚಾರವಾಗಿ ನನಗೆ ಸ್ವಲ್ಪ ಸಮಯ ಕೊಡಿ. ರಾಜ್ಯದಲ್ಲಿ 84 ಕೋಟಿ ಹಣವನ್ನ ಮಂತ್ರಿಯೊಬ್ಬರು ಬೇರೆ ಬೇರೆ ಕೆಲಸಕ್ಕೆ ಬಳಕೆ ಮಾಡಿಕ್ಕೊಂಡಿದ್ದಾರೆ. ರಾಜ್ಯದಲ್ಲಿ ಹಣ ಪೋಲಾಗಿದೆ. ಎಸ್ ಐ ಟಿ ಟವರು ತನಿಖೆ ಮಾಡುತ್ತಿದ್ದಾರೆ ಕಾದು ನೋಡೋಣ.
ನಾನು ಸ್ಟಾಪ್ ಗ್ಯಾಪ್ ನಲ್ಲಿ ಸಿಎಂ ಆದವನು 2018 ರ ಬಜಟ್ ನಲ್ಲಿ ಇಂಡಸ್ಟ್ರಿಸ್ ಕ್ಲಸ್ಟರ್ ಗಳಿಗೆ 9 ಜಿಲ್ಲೆಗೆ ಅನುದಾನ ಕೊಡಲು ಸಿದ್ದನಾಗಿದ್ದೆ. ಸದ್ಯ ಕೇಂದ್ರದಲ್ಲಿ ಮಂತ್ರಿ ಸ್ಥಾನ ಸಿಕ್ಕಿದೆ. ನಾನು ಕೇವಲ ರಾಜ್ಯದ ಮಂತ್ರಿಯಲ್ಲ ಕೇಂದ್ರದ ಮಂತ್ರಿಯಾಗಿ ಕೆಲಸ ಮಾಡಬೇಕು. ದೇಶದಲ್ಲಿ ಯಾವ ರೀತಿ ಕೈಗಾರಿಕೆಯನ್ನ ನಡೆಸಬೇಕು ಎಂಬುದರ ಬಗ್ಗೆ ವಿಚಾರ ಮಾಡುತ್ತಿದ್ದೆನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

