Friday, March 14, 2025

Latest Posts

Modi: ಮೋದಿ ಟೀಕಿಸಿದ ಚೀನಾ ;ತೈವಾನ್ ತಿರುಗೇಟು

- Advertisement -

ಪ್ರಧಾನಮಂತ್ರಿಯಾಗಿ ಮೋದಿ ಅಧಿಕಾರ ಸ್ವೀಕಾರ ಮಾಡಿದ್ದಕ್ಕೆ ಭಾರತಿಯರು ಮಾತ್ರವಲ್ಲದೆ, ದೇಶ-ವಿದೇಶದಿಂದಲು ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಮೋದಿ ಹೆದರುವುದಿಲ್ಲಾ ಎಂದು ತೈವಾನ್ ದೇಶದ ಉಪ ವಿದೇಶಾಂಗ ಸಚಿವ ಟಿಯೆನ್ ಚುಂಗ್ – ಕ್ವಾಂಗ್ ಹೇಳಿಕೆಯನ್ನು ನೀಡಿದ್ದಾರೆ.
ದ್ವೀಪ ರಾಷ್ಟ್ರ ತೈವಾನ್ ಮತ್ತು ಭಾರತದ ನಡುವಿನ ಸಂದೇಶಗಳ ವಿನಿಮಯದ ಬಗ್ಗೆ ಟೀಕೆಗೆ ತೈವಾನ್ ಚೀನಾಗೆ ತಿರುಗೇಟು ನೀಡಿದೆ. ಚೀನಾದ ಟೀಕೆಗಳಿಗೆ ತಮ್ಮ ಅಧ್ಯಕ್ಷರಾಗಲಿ ಅಥವಾ ಭಾರತದ ಪ್ರಧಾನಿ ಮೋದಿಯಾಗಲಿ ಹೆದರುವುದಿಲ್ಲ ಎಂದು ತೈವಾನ್ ಉಪ ವಿದೇಶಾಂಗ ಸಚಿವ ಟಿಯೆನ್ ಚುಂಗ್-ಕ್ವಾಂಗ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೋದಿ ಮತ್ತು ತೈವಾನ್ ಅಧ್ಯಕ್ಷ ಲಾಯ್ ಚಿಂಗ್ ಟೆ ನಡುವಿನ ಸಂದೇಶಗಳ ವಿನಿಮಯದ ಬಗ್ಗೆ ಚೀನಾದ ವಿದೇಶಾಂಗ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದ ನಂತರ ತೈವಾನ್ ಈ ತಿರುಗೇಟು ನೀಡಿದೆ.
ಕಳೆದ ತಿಂಗಳು ಚುನಾಯಿತರಾದ ತೈವಾನ್ ಅಧ್ಯಕ್ಷ ಲೈ ಚಿಂಗ್ ಟೆ ಅವರು ಜೂನ್ 7 ರಂದು ಎಕ್ಸ್ ಪೋಸ್ಟ್​ನಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯ ವಿಜಯಕ್ಕಾಗಿ ಮೋದಿಯವರನ್ನು ಅಭಿನಂದಿಸಿದ್ದಾರೆ. ಮೋದಿಯವರ ಚುನಾವಣಾ ಗೆಲುವಿಗಾಗಿ ನನ್ನ ಪ್ರಾಮಾಣಿಕ ಅಭಿನಂದನೆಗಳು. ವೇಗವಾಗಿ ಬೆಳೆಯುತ್ತಿರುವ ತೈವಾನ್ – ಭಾರತದ ಪಾಲುದಾರಿಕೆಯನ್ನು ಹೆಚ್ಚಿಸಲು ನಾವು ಎದುರು ನೋಡುತ್ತಿದ್ದೇವೆ. ಇಂಡೋಪೆಸಿಫಿಕ್‍ನಲ್ಲಿ ಶಾಂತಿ ಮತ್ತು ಸಮೃದ್ಧಿಗೆ ಕೊಡುಗೆ ನೀಡಲು ವ್ಯಾಪಾರ, ತಂತ್ರಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿ ನಮ್ಮ ಸಹಯೋಗವನ್ನು ವಿಸ್ತರಿಸುತ್ತೇವೆ ಎಂದು ಅವರು ತಿಳಿಸಿದ್ದರು.
ಈ ಸಂದೇಶಕ್ಕೆ ಪ್ರತ್ಯುತ್ತರ ನೀಡಿದ ಮೋದಿ, ನಿಮ್ಮ ಆತ್ಮೀಯ ಸಂದೇಶಕ್ಕಾಗಿ ಲೈ ಚಿಂಗ್ ಟೆ ಅವರಿಗೆ ಧನ್ಯವಾದಗಳು. ನಾವು ಪರಸ್ಪರ ಲಾಭದಾಯಕ ಆರ್ಥಿಕ ಮತ್ತು ತಾಂತ್ರಿಕ ಪಾಲುದಾರಿಕೆಗಾಗಿ ಕೆಲಸ ಮಾಡುವಾಗ ನಾನು ನಿಕಟ ಸಂಬಂಧಗಳನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದರು.
ಸಂದೇಶಗಳ ವಿನಿಮಯದ ನಂತರ, ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ಮೋದಿ ಮತ್ತು ಚಿಂಗ್ ಟೆ ನಡುವಿನ ಸಂವಾದಕ್ಕೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ತೈವಾನ್‍ನೊಂದಿಗಿನ ಭಾರತದ ಸಂವಹನವನ್ನು ಟೀಕಿಸಿದ ಅವರು, ಭಾರತವು ಈ ಬಗ್ಗೆ ಗಂಭೀರವಾದ ರಾಜಕೀಯ ಬದ್ಧತೆಗಳನ್ನು ಮಾಡಿದೆ. ತೈವಾನ್ ಅಧಿಕಾರಿಗಳ ರಾಜಕೀಯ ಲೆಕ್ಕಾಚಾರಗಳನ್ನು ಗುರುತಿಸಬೇಕು, ಎಚ್ಚರದಿಂದಿರಬೇಕು ಮತ್ತು ವಿರೋಧಿಸಬೇಕು ಎಂದಿದ್ದರು.

- Advertisement -

Latest Posts

Don't Miss