ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಇದರ ಬೆನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ವಾಗ್ದಾಳಿ ನಡೆದಿದ್ದಾರೆ.
ನೀಟ್ ಪರೀಕ್ಷೆ ಅಕ್ರಮ ಮೋದಿ ಸರ್ಕಾರದ ಬಹುದೊಡ್ಡ ಹಗರಣವಾಗಿದೆ. ಈ ಅಕ್ರಮದಲ್ಲಿ ಬಹಳ ದೊಡ್ಡ ದೊಡ್ಡ ಜನ ಶಾಮೀಲಾಗಿದ್ದಾರೆ. ಈ ರೀತಿಯ ಶಂಕೆ ಇಡೀ ದೇಶದ ಜನರಿಗೆ ಬರುತ್ತಿದೆ. ಕೇಂದ್ರ ಸರ್ಕಾರದ ನಿಲುವು ಅನುಮಾನಾಸ್ಪದವಾಗಿದೆ ಎಂದು ಸಚಿವರು ಟೀಕಿಸಿದ್ದಾರೆ.
ಬಹಳ ದೊಡ್ಡ ಮಟ್ಟದ ಹಗರಣ ನಡೆದರೂ ಕೇಂದ್ರ ಸರ್ಕಾತ ತನಿಖೆ ಮಾಡುತ್ತಿಲ್ಲ. ಈ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂಬುದು ಎಲ್ಲ ರಾಜ್ಯಗಳ ಆಗ್ರಹವಾಗಿದೆ. ಕೇಂದ್ರ ಸರ್ಕಾರ ತನಿಖೆಗೆ ಮುಂದಾಗುತ್ತಿಲ್ಲ. 24 ಲಕ್ಷ ಮಕ್ಕಳು ಪರೀಕ್ಷೆ ಬರೆದಿದ್ದಾರೆ. ಅವರ ಭವಿಷ್ಯದ ಜೊತೆ ಮೋದಿ ಸರ್ಕಾರ ಚೆಲ್ಲಾಟ ಆಡುತ್ತಿದೆ ಎಂದು ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ನೀಟ್ ಅಕ್ರಮ ಮೋದಿ ಸರ್ಕಾರದ ದೊಡ್ಡ ಹಗರಣ- ಸಚಿವ ಪಾಟೀಲ್
- Advertisement -
- Advertisement -

