ಲೋಕಸಭಾ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಸೋತಿದ್ರೆ ನಾನು ಸಾಧು ಆಗಿ ಹಿಮಾಲಯ ಸೇರಲು ನಿರ್ಧಾರ ಮಾಡಿದ್ದೆ. ಅದಕ್ಕಾಗಿ ಹಿಮಾಲಯದಲ್ಲಿ ಜಾಗವನ್ನೂ ನೋಡಿಕೊಂಡು ಬಂದಿದ್ದೇ. ಹೀಗಂತ ಹೇಳಿದವ್ರೂ ಮತ್ಯಾರು ಅಲ್ಲಾ.. ಮಾಜಿ ಸಚಿವ, ಗೋಕಾಕ ಸೌಕಾರ್ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ..
ಹೌದು ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಿಂದ ಗೆಲುವು ದಾಖಲಿಸಿರುವ ಜಗದೀಶ್ ಶೆಟ್ಟರ್ ಹಾಗೂ ರಮೇಶ ಜಾರಕಿಹೊಳಿಗೆ ಗೋಕಾಕ ಬಿಜೆಪಿ ಘಟಕದಿಂದ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.. ಈ ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ವಿಧಾನಸಭೆ ಚುನಾವಣೆಯಲ್ಲಿ ನಮಗೆ ತೀವ್ರ ಹಿನ್ನಡೆಯಾಗಿತ್ತು. ಪದೇಪದೆ ಸೋತರೆ ನಮಗೆ ಲೀಡರ್ಸ್ ಅನ್ನಲ್ಲ ಅಂದ್ರು..
ಹಾಗಾಗಿ ಲೋಕಸಭೆ ಚುನಾವಣೆಯಲ್ಲಿ ನಾವು ಗೆಲ್ಲಲೇಬೇಕಿತ್ತು. ನಮ್ಮ ಕಾರ್ಯಕರ್ತರು ದುಡ್ಡು ನೋಡಲಿಲ್ಲ. ಒಂದು ಕಪ್ ಚಹಾವನ್ನೂ ನಿರೀಕ್ಷೆ ಮಾಡಲಿಲ್ಲ. ತಮ್ಮ ಕೈಯಿಂದಲೇ ಪೆಟ್ರೋಲ್ ಹಾಕಿಸಿಕೊಂಡು ಊರೂರು ಸುತ್ತಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಪರ ಪ್ರಚಾರ ಮಾಡಿದರು. ಹಠಕ್ಕೆ ಬಿದ್ದು ನಾವು ಪ್ರಚಾರ ಮಾಡಿದಕ್ಕೆ ಬಿಜೆಪಿಗೆ ಇಷ್ಟೊಂದು ದೊಡ್ಡ ಗೆಲುವು ಸಿಗಲು ಕಾರಣವಾಯಿತು ಅಂದ್ರು..
ಲೋಕಸಭೆ ಚುನಾವಣೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದರು. ಪುತ್ರನನ್ನು ಗೆಲ್ಲಿಸಲು ಸಚಿವೆ ಹೆಬ್ಬಾಳ್ಕರ್ ಮನಬಂದಂತೆ ದುಡ್ಡು ತೂರಾಡಿದರು. ಯಾವುದೇ ಕ್ಷೇತ್ರಕ್ಕೆ ಹೋಗಲಿ ಮೆರವಣಿಗೆ ಮಾಡಲು ಜೀಪ್‍ಗೆ ಹಾಗೂ ಹಾರ ತುರಾಯಿ ಹಾಕಿಸಿಕೊಳ್ಳಲು ಹೆಬ್ಬಾಳ್ಕರ್ ದುಡ್ಡು ಕೊಡುತ್ತಿದ್ದರು. ತಮ್ಮದೇ ದುಡ್ಡಿನಿಂದ ಖರೀದಿಸಿದ ಹಾರವನ್ನು ತಾವೇ ಪ್ರಚಾರ ಸಭೆಗಳಲ್ಲಿ ಹಾಕಿಕೊಳ್ಳುತ್ತಿದ್ದರು. ವಿಧಾನಸಭೆ ಚುನಾವಣೆ ಬಳಿಕ ಮಹಾನಾಯಕ ಹಾಗೂ ವಿಷಕನ್ಯೆಯ ಸೊಕ್ಕಿನ ರಾಜಕಾರಣದ ದರ್ಪ ಜೋರಾಗಿತ್ತು. ದುಡ್ಡಿನಿಂದ ಎಲ್ಲವನ್ನೂ ಗೆಲ್ಲಬಹುದು ಎಂದು ಕೊಂಡವರಿಗೆ ಈ ಚುನಾವಣೆಯಲ್ಲಿ ಉತ್ತರ ಸಿಕ್ಕಿದೆ ಎಂದು ಕಿಡಿಕಾರಿದರು
ಗೋಕಾಕ ಕ್ಷೇತ್ರದ ಮಹತ್ವಾಕಾಂಕ್ಷೆಯ ಗಟ್ಟಿ ಬಸವಣ್ಣ ಏತನೀರಾವರಿ ಯೋಜನೆಗೆ ಬಿಜೆಪಿ ಸರ್ಕಾರ ಅನುಮೋದನೆ ನೀಡಿತ್ತು. ಚುನಾವಣೆಗೂ ಮುನ್ನ ಸಿಎಂ ಆಗಿದ್ದ ಬಸವರಾಜ್ ಬೊಮ್ಮಾಯಿ ಗೋಕಾಕ ನಗರಕ್ಕೆ ಆಗಮಿಸಿ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಿದ್ದರು. ಕಾಂಗ್ರೆಸ್ ಸರ್ಕಾರ ಬಂದ ನಂತರ ಈಗಿನ ಜಲಸಂಪನ್ಮೂಲ ಸಚಿವರು ಈ ಯೋಜನೆಯನ್ನು ತಡೆ ಹಿಡಿದಿದ್ದಾರೆ. ನನ್ನ ಕ್ಷೇತ್ರದ ನೀರಾವರಿ ಯೋಜನೆಗೆ ಅಡ್ಡಗಾಲು ಹಾಕಲಾಗುತ್ತಿದೆ.
ಈ ಯೋಜನೆಯನ್ನು ಸ್ಥಗಿತಗೊಳಿಸಿದ್ದರೆ ನಾನು ಡಿಕೆಶಿ ವಿರುದ್ಧ ಹೋರಾಟಕ್ಕೆ ನಿರ್ಧರಿಸಿದ್ದೆ. ಆದರೆ ತಡೆಹಿಡಿದಿರುವುದು ಗೊತ್ತಾಗಿದೆ. ಈ ಯೋಜನೆ ಜಾರಿಯಾದ್ರೆ ಎಲ್ಲರಿಗೂ ಒಳ್ಳೆಯದಾಗುತ್ತದೆ. ಇಲ್ಲವಾದರೆ ದೇವರ ಆಶೀರ್ವಾದದಿಂದ ಇನ್ನೆನೋ ಆಗಲಿದೆ ಎಂದ್ರು..
ಭಾಷಣದುದ್ದಕ್ಕೂ ರಾಜಕೀಯ ವೈರಿಗಳಾದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಗುಡುಗಿದರು. ಇನ್ನೂ ಸಿಎಂ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಬಿಸಿರೋ ರಮೇಶ್ ಜಾರಕಿಹೊಳಿ ಸಿದ್ದರಾಮಯ್ಯ ಸಿ
Ramesh Jarkiholi : ಶೆಟ್ಟರ್ ಸೋತಿದ್ರೆ ಸನ್ಯಾಸಿ ಆಗ್ತಿದ್ದೆ!
- Advertisement -
- Advertisement -