www.karnatakatv.net : ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ನಿರ್ಮಾಣಗೊಂಡಿರೋ ಕನ್ನಡದ ಬಹುನಿರೀಕ್ಷಿತ ʼಲಾʼ ಸಿನಿಮಾ 17 ಜುಲೈ 2020 ರಂದು ಅಮೆಜಾನ್ ಫ್ರೈಮ್ ನಲ್ಲಿ ಬಿಡುಗಡೆಯಾಗಲಿದೆ. ಕ್ರೈಂ ಥ್ರಿಲ್ಲರ್ ಕಥಾವಸ್ತು ಹೊಂದಿರುವ ಈ ಚಿತ್ರದಲ್ಲಿ ನಂದಿನಿ ಪಾತ್ರದಲ್ಲಿ ರಾಗಿಣಿ ಪ್ರಜ್ವಲ್ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಮಹಿಳೆಯರ ಮೇಲಿನ ಅನ್ಯಾಯ ಮತ್ತು ಅಪರಾಧದ ವಿರುದ್ದ ಧ್ವನಿ ಎತ್ತಲಾಗಿದೆ.
ಅಶ್ವಿನಿ ಪನೀತ್ ರಾಜ್ ಕುಮಾರ್, ಎಂ. ಗೋವಿಂದ ನಿರ್ಮಾಣದ ʼಲಾʼ ಸಿನಿಮಾವನ್ನು ರಘು ಸಮರ್ಥ ನಿರ್ದೇಶಿಸಿದ್ದಾರೆ. ರಾಗಿಣಿ ಪ್ರಜ್ವಲ್ ಈ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ್ದಾರೆ. ಮುಖ್ಯಮಂತ್ರಿ ಚಂದ್ರು. ಅಚ್ಯುತ್ ಕುಮಾರ್, ಸುಧಾರಾಣಿ, ಸಿರಿ ಪ್ರಹ್ಲಾದ್ ಮತ್ತಿತ್ತರರು ಪ್ರಮುಖ ಪಾತ್ರದ್ಲಲಿ ಅಭಿನಯಿಸಿದ್ದಾರೆ. ‘ಲಾ’ ಸಿನಿಮಾ ಸ್ಯಾಂಡಲ್ ವುಡ್ ನಿಂದ ಥಿಯೇಟರ್ ನಲ್ಲಿ ಬಿಡುಗಡೆಯಾಗುವ ಮೊದಲೇ ಡಿಜಿಟಲ್ ನಲ್ಲಿ ರಿಲೀಸ್ ಆಗುತ್ತಿರುವ ಮೊದಲ ಚಿತ್ರವಾಗಿದೆ. ಈ ಸಿನಿಮಾ ಅಮೆಜಾನ್ ಫ್ರೈಮ್ ವಿಡಿಯೋ ಮೂಲಕ ವಿಶ್ವದಾದ್ಯಂತ 200 ಕ್ಕೂ ಹೆಚ್ಚು ದೇಶಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.
ಎಂಟರ್ ಟೈನ್ಮೆಂಟ್ ಬ್ಯೂರೋ, ಕರ್ನಾಟಕ ಟಿವಿ