Thursday, October 16, 2025

Latest Posts

ಅಫ್ಘಾನಿಸ್ತಾನ ಸಾಧನೆಯನ್ನು ಕೊಂಡಾಡಿದ ಕ್ರಿಕೆಟ್ ದೇವರು

- Advertisement -

ಟಿ20 ವಿಶ್ವಕಪ್​ನ ಸೂಪರ್ 8 ಪಂದ್ಯದಲ್ಲಿ ಬಾಂಗ್ಲಾದೇಶ ಮಣಿಸಿ ಅಫ್ಘಾನಿಸ್ತಾನ ಮೊದಲ ಬಾರಿಗೆ ಸೆಮಿಫೈನಲ್​ ಪ್ರವೇಶಿಸಿದೆ. ಅಫಘಾನಿಸ್ತಾನ ತಂಡದ ಸಾಧನೆಯನ್ನು ದಿಗ್ಗಜ ಕ್ರಿಕೆಟಿಗ ಸಚಿನ್​ ತೆಂಡೂಲ್ಕರ್​ ಕೊಂಡಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕ್ರಿಕೆಟ್ ದೇವರು, ನ್ಯೂಜಿಲ್ಯಾಂಡ್​ ಮತ್ತು ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡಗಳನ್ನು ಮಣಿಸಿ ಸೆಮಿಫೈನಲ್‌ ಪ್ರವೇಶಿಸಿರುವ ನಿಮ್ಮ ಗೆಲುವಿನ ಹಾದಿಯು ಅದ್ಭುತವಾಗಿದೆ. ಇಂದಿನ ಗೆಲುವು ನಿಮ್ಮ ಕಠಿಣ ಪರಿಶ್ರಮ ಮತ್ತು ಸಂಕಲ್ಪಕ್ಕೆ ಸಾಕ್ಷಿಯಾಗಿದೆ. ನಿಮ್ಮ ಪ್ರಗತಿಯ ಬಗ್ಗೆ ತುಂಬಾ ಹೆಮ್ಮೆ ಇದೆ. ಹೀಗೇ ಮುಂದುವರಿಯಿರಿ ಎಂದು ತಿಳಿಸಿದ್ದಾರೆ.

ಸೂಪರ್ 8 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ್ದ ಅಫಘಾನಿಸ್ತಾನ 5 ವಿಕೆಟ್​ಗೆ 115 ರನ್​ ಬಾರಿಸಿತು. ಬಾಂಗ್ಲಾ ಬ್ಯಾಟಿಂಗ್​ ವೇಳೆ ಳೆ ಹಲವು ಬಾರಿ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತು. ಹೋಗಾಗಿ, 1 ಓವರ್​ ಕಡಿತಗೊಳಿಸಿ 19 ಓವರ್​ಗೆ 114 ರನ್​ ಗೆಲುವಿನ ಗುರಿ ನೀಡಲಾಯಿತ್ತು. ಬಾಂಗ್ಲಾ 17.5 ಓವರ್​ನಲ್ಲಿ 105 ರನ್​ಗೆ ಸರ್ವಪತನ ಕಂಡಿತು. ಇದರೊಂದಿಗೆ ಆಫ್ಘನ್ ದೊಡ್ಡ ರೋಚಕ ಗೆಲುವು ದಾಖಲಿಸಿತು.

- Advertisement -

Latest Posts

Don't Miss