Political News: ನಟ ಚೇತನ್ ಅಹಿಂಸಾ ಕರ್ನಾಟಕ ಟಿವಿಯ ಸಂದರ್ಶನದಲ್ಲಿ ಮಾತನಾಡಿದ್ದು, ರಾಜಕೀಯ ಚಟುವಟಿಕೆಗಳ ಬಗ್ಗೆ ತಮ್ಮ ಅನಿಸಿಕೆ ಹೇಳಿದ್ದಾರೆ.
ನಮಗೆ ಚುನಾವಣೆ ಸೋತರೂ ಬೇಜಾರಿಲ್ಲ, ನಮ್ಮ ಸಿದ್ಧಾಂತ ಸೋಲಬಾರದು. ನಮ್ಮ ಸಿದ್ಧಾಂತವೇ ಸತ್ಯ. ನಮ್ಮ ಸಿದ್ಧಾಂತವೇ ಸಂವಿಧಾನ ಪೀಠಿಕೆಗೊಳಿಸುತ್ತಿರೋದು. ಇದೆಲ್ಲವನ್ನೂ ಜನರ ಮುಂದೆ ಇಡಬೇಕು. ಸರಿಯಾದ ಸಮಯಕ್ಕೆ ಅದನ್ನು ಜನರ ಮುಂದೆ ತರಬೇಕು. ನಾವು ನೆಟ್ಟ ಗಿಡದ ಫಲ ನಾವೇ ತಿನ್ನಬೇಕು ಅನ್ನೋ ಆಸೆ ನಮಗಿಲ್ಲ. ಗಿಡ ನೆಡೋದು, ನಮ್ಮ ಕರ್ತವ್ಯ ಆದರೆ ಅದರ ಫಲ ಯಾರೂ ಬೇಕಾದ್ರೂ ಪಡೆಯಬಹುದು ಎಂದು ಚೇತನ್ ಹೇಳಿದ್ದಾರೆ.
ನಾನು ಆರ್‌ಎಸ್ಎಸ್ ಸಿದ್ಧಾಂತವನ್ನು ಒಪ್ಪುವುದಿಲ್ಲ. ಆದರೆ ಇಂದು ಆರ್‌ಎಸ್‌ಎಸ್ ಮತ್ತು ಬಿಜೆಪಿ ಪಠ್ಯ ಪುಸ್ತಕದಿಂದ ಗೆದ್ದಿಲ್ಲ, ಚಳುವಳಿಯಿಂದ ಗೆಲುವು ಸಾಧಿಸಿದೆ. ಹೆಡ್ಗೆವಾರ್ ಸಸಿ ನೆಟ್ಟು, ಆರ್‌ಎಸ್‌ಎಸ್ ಬೆಳೆಸಿದರು, ಅದರ ಸಿದ್ಧಾಂತವನ್ನು ಫಾಲೋ ಮಾಡಿಕೊಂಡು ಬಂದವರು, ಇದೀಗ, ಅದರ ಫಲ ಪಡೆಯುತ್ತಿದ್ದಾರೆ. ಅದರಂತೆ ನಮ್ಮ ಸಿದ್ಧಾಂತವನ್ನು ನಾವು ಸರಿಯಾಗಿ ಅನುಸರಿಸಿದಾಗಲೇ, ನಮಗೆ ಅದರ ಫಲ ಸಿಗೋದು. ಎಲ್‌ಲ ರೀತಿ ಅಭಿವೃದ್ಧಿಗೂ, ಸಮಾನತೆ ಸಾಧಿಸಲು ಸಮಯ ತೆಗೆದುಕೊಳ್ಳುತ್ತದೆ. ಅದಕ್ಕಾಗಿ ನಾವು ಕಷ್ಟಪಡಬೇಕು ಅಂತಾ ಚೇತನ್ ಹೇಳಿದ್ದಾರೆ.
ಇನ್ನು ಬಿಜೆಪಿ ಬಗ್ಗೆ ಮಾತನಾಡಿದ ಚೇತನ್, ಬಿಜೆಪಿಯಲ್ಲಿ ಮುಂದಾಲೋಚನೆ ಇದೆ. ಕಾಂಗ್ರೆಸ್ಸಿಗರು ಚುನಾವಣೆ ಗೆಲ್ಲೋಕ್ಕೆ ಕಾರಣರಾದವರನ್ನು ಅಧಿಕಾರಕ್ಕೆ ತಂದು ಕೂರಿಸಿತು. ಆದರೆ ಬಿಜೆಪಿ ಒಂದೆರಡು ವಾರ ಕಾದು, ಅವರ ಪಕ್ಷದ ಸಿದ್ಧಾಂತವನ್ನು ಹಲವರಿಗೆ ತಲುಪಿಸುವ ತಾಕತ್ತು ಯಾರಿಗಿದೆ ಎಂದು ತಿಳಿದು, ಅಂಥವರಿಗೆ ಅಧಿಕಾರ ಕೊಟ್ಟಿದೆ. ಹಾಗಾಗಿ ಲೋಕಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತ ಬರದಿದ್ದರೂ ಕೂಡ ಮೋದಿಯೇ ಮೂರನೇ ಬಾರಿ ಪ್ರಧಾನಿಯಾಗಿದ್ದಾರೆ ಅಂತಾ ಚೇತನ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಈ ಬಗ್ಗೆ ಪೂರ್ತಿ ಸಂದರ್ಶನಕ್ಕಾಗಿ, ಈ ವೀಡಿಯೋ ನೋಡಿ.