ಸಾಮಾನ್ಯವಾಗಿ ಎಲ್ರೂ ಕೂಡ ಮೆಹೆಂದಿ ಕೋನ್ ಅನ್ನು ಶುಭ ಸಮಾರಂಭದಲ್ಲಿ ಕೈ ಕಾಲಿಗೆ ಮೆಹೆಂದಿ ಹಾಕೋಕೆ ಬಳಸ್ತಾರೆ. ಅದ್ರೆ ಇಲ್ಲೊಬ್ಬ ಡಾಕ್ಟ್ರು ಓಷಧಿ ಚೀಟಿಯಲ್ಲಿ ಮೆಹೆಂದಿ ಕೋನ್ ಬರೆದು ರೋಗಿಗೆ ತರೋದಕ್ಕೆ ಹೇಳಿದ್ದಾರೆ. ಅರೇ ಮೆಡಿಸಿನ್ ಚೀಟಿಲಿ ಮೆಹೆಂದಿ ಕೋನ್ ಪ್ರಿಸ್ಕ್ರಿಪ್ಷನ್ ಅಂತಾ ಕನ್ಪ್ಯೂಸ್ ಆಗ್ತಿದೀರಾ. ಆ ಕಥೆ ನಾವ್ ತೋರಿಸ್ತಿವಿ ನೋಡಿ
ಕರೆಕ್ಟ್ ಆಗಿ ನೊಡ್ಕೊಂಡು ಬಿಡಿ, ಇದು ನಿಜವಾಗ್ಲೂ ಕೂಡ ರೋಗಿಗೆ ಡಾಕ್ಟರ್ ಬರೆದುಕೊಟ್ಟಿರೋ ಔಷಧಿ ಚೀಟಿ. ಹಾಸನದ ಶ್ರೀ ಚಾಮರಾಜೇಂದ್ರ ಜಿಲ್ಲಾ ಆಸ್ಪತ್ರೆ ಚೀಟಿ. ಕಾಲು ಮೊಳೆ ಅಂತಾ ಚಿಕಿತ್ಸೆಗೆ ಬಂದಿರೋ ರೋಗಿಯೊಬ್ಬರಿಗೆ ಹಾಸನ ಜಿಲ್ಲಾಸ್ಪತ್ರೆ ವೈದ್ಯರು, ದಾದಿ ಮೆಹಂದಿ ಕೋನ್ ಬರೆದುಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ಆರು ಇಂಚಿನ ಕ್ರೇಪ್ ಬ್ಯಾಂಡೇಜ್ ಎರಡು ಬರೆದಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನೂ ನೆಟ್ಟಿಗರು ಈ ವೈರಲ್ ಚೀಟಿ ಬಗ್ಗೆ ತಹರೇವಾರಿ ಕಾಮೆಂಟ್ ಮಾಡ್ತಿದ್ದಾರೆ. ಇದ್ರ ಅಸಲೀ ಕಥೆ ಏನು ಹೇಳ್ಬಿಡ್ತಿವಿ ಕೇಳಿ.
ಕಾಲು ಮುರಿದುಕೊಂಡಿದ್ದ ವಯೋವೃದ್ಧರೊಬ್ಬರು ಬ್ಯಾಂಡೇಜು ಹಾಕಿಸಿಕೊಂಡು ಹೋಗಲು ಹಾಸನದ ಚಾಮರಾಜೇಂದ್ರ ಜಿಲ್ಲಾ ಆಸ್ಪತ್ರೆಗೆ ಬಂದಿದ್ದರು. ಅವರನ್ನು ಪರಿಶೀಲಿಸಿದ ಆಸ್ಪತ್ರೆಯ ದಾದಿಯೊಬ್ಬರು, ಆರು ಇಂಚಿನ ಕ್ರೇಪ್ ಬ್ಯಾಂಡೇಜ್ ಎರಡು ಮತ್ತು ಒಂದು ಮೆಹಂದಿ ಕೋನ್ ತೆಗೆದುಕೊಂಡ ಬರುವಂತೆ ಚೀಟಿ ಬರೆದು ಕೊಟ್ಟಿದ್ದಾರೆ. ಔಷದಿ, ಮಾತ್ರೆ ಬದಲಾಗಿ ಔಷಧಿ ಚೀಟಿಯಲ್ಲಿ ಮೆಹಂದಿ ಕೋನ್ ಎಂದು ಬರೆದ ಫೋಟೋ ವೈರಲ್ ಆಗಿದೆ.
ಇನ್ನು ಈ ಔಷಧಿ ಚೀಟಿ ಸ್ಪಷ್ಟನೆ ನೀಡಿರುವ ಹಾಸನ ಹಿಮ್ಸ್ ಆಸ್ಪತ್ರೆ ವೈದ್ಯಾಧಿಕಾರಿಗಳು, ವೆರಿಕೋಸ್ ವೇನ್ಸ್ ಶಸ್ತ್ರಚಿಕಿತ್ಸೆಗೆ ಸಹಾಯಕವಾಗುವುದಕ್ಕೆ ಮೆಹಂದಿ ಕೋನ್ ಬಳಸಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.
ವೆರಿಕೋಸ್ ವೇನ್ಸ್ ಶಸ್ತ್ರಚಿಕಿತ್ಸೆಗೆ ಸಹಾಯಕವಾಗೋದಕ್ಕೆ ಮೆಹಂದಿ ಕೋನ್ ಬಳಸಲಾಗುತ್ತದೆ. ಪೆನ್‌ನಿಂದ ಮಾರ್ಕ್ ಮಾಡಿದರೆ ಗುರುತು ಅಳಿಸಿ ಹೋಗೋ ಸಾಧ್ಯತೆ ಇದೆ. ಸ್ಪಿರಿಟ್ ಹಾಕಿ ತೊಳೆದರೆ ಪೆನ್ನಿನ ಮಾರ್ಕ್ ಅಳಿಸಿ ಹೋಗುತ್ತೆ. ಈ ಕಾರಣಕ್ಕಾಗಿ ಶಸ್ತ್ರಚಿಕಿತ್ಸೆ ಸಂದರ್ಭ ಮೆಹಂದಿಯಿಂದ ಗುರುತು ಹಾಕಿಕೊಳ್ಳಲಾಗುತ್ತೆ. ಮೆಹಂದಿಯಿಂದ ಗುರುತು ಮಾಡಿದ್ರೆ ಮೂರ್ನಾಲ್ಕು ದಿನ ಉಳಿಯುತ್ತೆ. ಆದ್ದರಿಂದ ರೋಗಿಗೆ ಮೆಹಂದಿ ಕೋನ್ ತರುವಂತೆ ಸೂಚಿಸಿದ್ದು, ಕಾಲಿನ ಗಂಟುಗಳ ಗುರುತಿಸಿ ಶಸ್ತ್ರಚಿಕಿತ್ಸೆ ಮಾಡಲು ಮೆಹಂದಿ ಬಳಕೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಮೆಹಂದಿ ಕೋನ್ ಬರೆದುಕೊಟ್ಟಿರುವ ಔಷಧಿ ಚೀಟಿಯ ವೈರಲ್ ಆಗುತ್ತಿರುವುದಕ್ಕೆ ಸ್ಪಷ್ಟನೆ ನೀಡಿದರು.
ಒಟ್ನಲ್ಲಿ ಮೆಹಂದಿ ಕೋನ್ ನಿಂದ ಯಾವ ಚಿಕಿತ್ಸೆ ನೀಡುತ್ತಾರೆ ಎಂಬ ಪ್ರಶ್ನೆ ಜನರಲ್ಲಿ ಅಚ್ಚರಿ ಮೂಡಿಸಿತ್ತು. ಸದ್ಯಕ್ಕೆ ವೈದ್ಯರ ಸ್ಪಷ್ಟನೆಯಿಂದ ಇದಕ್ಕೆ ಉತ್ತರ ಸಿಕ್ಕಿದೆ.