ಎಲ್ಲರಿಗೂ ಮದುವೆಯಾಗಬೇಕು ಅಂತ ಒಮ್ಮೆಯಾದರೂ ಅನಿಸುತ್ತದೆ, ಅಲ್ಲವೇ? ಕೆಲವರಿಗೆ ಒಂದಲ್ಲಾ ಒಂದು ವಯಸ್ಸಿನಲ್ಲಿ ಅನ್ನಿಸಿದರೆ ಮತ್ತೆ ಕೆಲವೊಬ್ಬರಿಗೆ ವಯಸ್ಸಲ್ಲದ ವಯಸ್ಸಿನಲ್ಲಿ ಅನ್ನಿಸುತ್ತದೆ. ಆದ್ರೆ, ಇತ್ತೀಚಿನ ದಿನಗಳಲ್ಲಿ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ. ಅದಕ್ಕಾಗಿ ನಾನಾ ಜ್ಯೋತಿಷಿಗಳ ಬಳಿ ಹೋಗಿ ಸಲಹೆ ಕೇಳೋದು, ಪೂಜೆ- ಪುನಸ್ಕಾರ ಮಾಡೋದು, ಮ್ಯಾಟ್ರಿಮಾನಿ ವೆಬ್ಸೈಟ್ಗಳಲ್ಲಿ ತಮ್ಮ ಬಯೋಡಾಟವನ್ನು ಹಾಕಿಕೊಳ್ಳೋದು ಸಾಮಾನ್ಯವಾಗಿದೆ.
ಮದುವೆ ಸ್ವರ್ಗದಲ್ಲಿ ನಿಶ್ಚಯ ಆಗುತ್ತೆ ಅಂತಾರೆ ಹಿರಿಯರು. ಆದ್ರೆ ಇಲ್ಲೊಬ್ಳು ಐನಾತಿ ಹೋದ ಹೋದ ಊರಿನಲ್ಲೆಲ್ಲ ಮದುವೆ ನಿಶ್ಚಯ ಮಾಡಿಕೊಳ್ಳುತ್ತಿದ್ಳು.. ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಬೇಕು ಅಂತಾರೆ. ಆದ್ರೆ ಈಕೆ ಮಾತ್ರ ಸಾವಿರ ಸುಳ್ಳು ಹೇಳಿ, ಹೋದಲ್ಲಿ, ಬಂದಲ್ಲೆಲ್ಲಾ ಒಂದೊಂದು ಮದುವೆ ಆಗುತ್ತಿದ್ಳು. ವಯಸ್ಸಾದ ಹುಡುಗರನ್ನು, ಪತ್ನಿಯನ್ನು ಕಳೆದುಕೊಂಡವರನ್ನು ನಂಬಿಸಿ, ಅವರನ್ನು ಮದುವೆ ಆಗಿ, ಸಂಸಾರ ಮಾಡಿ, ಆಮೇಲೆ ಎಸ್ಕೇಪ್ ಆಗ್ತಿದ್ಳು. ಹೀಗೆ ಈಕೆ ವಂಚಿಸಿದ್ದು ಒಂದೆರಡು ಪುರುಷರನ್ನಲ್ಲ.. ಬರೋಬ್ಬರಿ 7 ಜನರ ಜೊತೆ ಈಕೆ ಮದುವೆ ಹೆಸರಲ್ಲಿ ಮೋಸ ಮಾಡಿದ್ದಾಳೆ. ಇದೀಗ ಈಕೆ ವಂಚಕ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಕುತೂಹಲದ ಸಂಗತಿ ಎಂದರೆ, ಈಕೆಯಲ್ಲಿ HIV ಕಂಡುಬಂದಿದೆ…
ಅರೇಂಜ್ ಮ್ಯಾರೇಜ್ ಹೆಸರಿನಲ್ಲಿ ಈಕೆ ಹಲವರಿಗೆ ವಂಚಿಸಿದ್ದಳು. ತಾನು ಸೇರಿ 7 ಜನರ ಗ್ಯಾಂಗ್ ಕಟ್ಟಿದ್ದ ಮಹಿಳೆಯು, ವಯಸ್ಸಾದರೂ ಮದುವೆಯಾಗದವರು, ಕಂಕಣ ಭಾಗ್ಯ ಕೂಡಿ ಬರದವರು, ಹೆಂಡತಿ ತೀರಿಕೊಂಡ ಬಳಿಕ ಒಂಟಿಯಾದವರನ್ನು ಗುರುತಿಸಿ, ಅವರನ್ನು ಮದುವೆಯಾಗುತ್ತಿದ್ದಳು. ಮದುವೆಯಾದ ಬಳಿಕ ಗ್ಯಾಂಗ್‌ನ ಸದಸ್ಯರನ್ನು ತನ್ನ ಸಂಬಂಧಿಕರು ಎಂದು ನೂತನ ವರಗಳಿಗೆ ಪರಿಚಯ ಮಾಡಿಸುತ್ತಿದ್ದಳು. ಇದಾದ ಬಳಿಕ, ಆ ವ್ಯಕ್ತಿಯ ಬಳಿಯ ನಗದು, ಚಿನ್ನಾಭರಣಗಳನ್ನು ಕದ್ದು ಪರಾರಿಯಾಗುತ್ತಿದ್ದಳು. ಉತ್ತರ ಪ್ರದೇಶ, ಉತ್ತರಾಖಂಡದಲ್ಲಿ ಹಲವರಿಗೆ ಮೋಸ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಮಹಿಳೆ ಹಾಗೂ 6 ಆರೋಪಿಗಳನ್ನು ಬಂಧಿಸಿದ್ದರು. ಎಲ್ಲಾ ಆರೋಪಿಗಳನ್ನು ಉತ್ತರ ಪ್ರದೇಶದ ಮುಜಫ್ಫರ್‌ನಗರದ ಜೈಲಿನಲ್ಲಿ ಇರಿಸಲಾಗಿದೆ.
ಕುತೂಹಲದ ಸಂಗತಿ ಎಂದರೆ, ಇತ್ತೀಚೆಗೆ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಜಿಲ್ಲಾಸ್ಪತ್ರೆಯ ವೈದ್ಯರು ನೀಡಿದ ವರದಿಯಲ್ಲಿ, ಮಹಿಳೆಗೆ ಏಡ್ಸ್ ಇರುವುದು ಪತ್ತೆಯಾಗಿದೆ. ಇದು ಈಗ ಭೀಕರ ಪ್ರಮಾಣದಲ್ಲಿ ಆರೋಗ್ಯ ಸಮಸ್ಯೆಯನ್ನು ತಂದೊಡ್ಡಿದೆ.
ಒಟ್ನಲ್ಲಿ ಸೀರಿಯಲ್ ಬ್ರೈಡ್ ಈಗ ಜೈಲು ಹಕ್ಕಿಯಾಗಿದ್ದಾರೆ. ಆದ್ರೆ, ಈಕೆಯಲ್ಲಿ ಹೆಚ್ಐವಿ ಪತ್ತೆಯಾಗಿರೋದು, ಆತಂಕ ಸೃಷ್ಟಿಸಿದೆ. ಈಕೆಯನ್ನು ನಂಬಿ ಸಪ್ತಪದಿ ತುಳಿದಿದ್ದರು ಎಲ್ಲಿದ್ದಾರೆ? ಎಂಬುದನ್ನು ಪತ್ತೆ ಹಚ್ಚುವುದೇ ಪೊಲೀಸರಿಗೆ ಸವಾಲಾಗಿದೆ.
ಮದುವೆಯಾಗೋದೆ ಈಕೆಯ ಕೆಲಸ- ಮದುವೆಯಾಗಿ ವಂಚಿಸಿದ್ದ ಮಹಿಳೆಗೆ ಎಚ್‌ಐವಿ
- Advertisement -
- Advertisement -